ಪಂದ್ಯದ ವಿಚಾರಕ್ಕೆ ಬಂದರೆ, ಜೈಪುರದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್, ವೈಭವ್ ಅವರ ಶತಕ ಮತ್ತು ಧ್ರುವ್ ಜುರೆಲ್ ಅವರ ಅರ್ಧಶತಕದ ಕಾರಣದಿಂದಾಗಿ ನಿಗದಿತ 20 ಓವರ್ಗಳಲ್ಲಿ 228 ರನ್ ಗಳಿಸಿತು. ಆದಾಗ್ಯೂ, ಇದಕ್ಕೆ ಉತ್ತರವಾಗಿ ಸನ್ರೈಸರ್ಸ್ ಹೈದರಾಬಾದ್ ತಂಡ, ಇಶಾನ್ ಕಿಶನ್ (77), ಅಭಿಷೇಕ್ ಶರ್ಮಾ (57), ನಿತೀಶ್ ಕುಮಾರ್ ರೆಡ್ಡಿ (36) ಮತ್ತು ಹೆನ್ರಿಕ್ ಕ್ಲಾಸೆನ್ (29) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 18.3 ಓವರ್ಗಳಲ್ಲಿ ಗೆಲುವು ಸಾಧಿಸಿತು.