ಅದೇ ಸಮಯದಲ್ಲಿ ರಜತ್ ಪಾಟೀದಾರ್ ಅವರ ಮದುವೆ ಕೂಡ ಫಿಕ್ಸ್ ಆಗಿತ್ತು. "ನನ್ನ ಮದುವೆ ದಿನಾಂಕ ನಿಗದಿಯಾಗಿತ್ತು. ಸುಮ್ಮನೆ ಹೋಗಿ ಬೆಂಚ್ ಕಾಯುವ ಬದಲು ಮದುವೆಯಾಗುವುದು ಒಳಿತು ಎಂದುಕೊಂಡಿದ್ದೆ. ಆದರೆ ನನ್ನ ಕೋಚ್‌ಗಳು, ಹಿರಿಯ ಆಟಗಾರರು ಮತ್ತು ಕುಟುಂಬದವರು ನನ್ನ ಮನವೊಲಿಸಿದರು. ಸಿಕ್ಕ ಅವಕಾಶವನ್ನು ಕೈಚೆಲ್ಲಬೇಡ, ಮದುವೆಯನ್ನು ಎರಡು ತಿಂಗಳು ಮುಂದೂಡು ಎಂದು ಸಲಹೆ ನೀಡಿದರು. ಅವರ ಮಾತು ಕೇಳಿ ನಾನು ಆರ್‌ಸಿಬಿ ತಂಡ ಸೇರಿಕೊಂಡೆ," ಎಂದು ಪಾಟೀದಾರ್ ತಿಳಿಸಿದ್ದಾರೆ.