ನರೇಗಾ ಕಾಮಗಾರಿ ವಿರೋಧಿಸಿದ್ದಕ್ಕೆ ಜಾತಿನಿಂದನೆ; ಮನನೊಂದು ಪ್ರಾಣಬಿಟ್ಟ ಮಹಿಳೆ, 8 ಮಂದಿ ವಿರುದ್ಧ ದೂರು ದಾಖಲು

1 Min Read
Deedgi Mailawwa

ವಿಜಯನಗರ: ನರೇಗಾ ಕಾಮಗಾರಿಯನ್ನು ವಿರೋಧಿಸಿದರು ಎಂಬ ಕಾರಣಕ್ಕೆ ಮಹಿಳೆ ಒಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಲಾಗಿದ್ದು, ಮನನೊಂದ ಆಕೆ ವಿಷ ಸೇವಿಸಿ ಪ್ರಾಣ ಬಿಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಮೈಲವ್ವ ದೀದ್ಗಿ ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ  ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ

ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಿಗೇರಿ ಗ್ರಾಮದಲ್ಲಿ ಮೈಲವ್ವ ದೀದ್ಗಿ ಅವರು ಕಳೆದ 15-20 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದರು. ಈ ನಡುವೆ ಪಂಚಾಯಿತಿ ವತಿಯಿಂದ ನರೇಗಾ ಕಾಮಗಾರಿ ಕೈಗೊಳ್ಳಲಾಗಿದ್ದು, ಜಮೀನಿನಲ್ಲಿ ಗೋಕಟ್ಟೆ ನಿರ್ಮಿಸಲು ದೀದ್ಗಿ ಮೈಲವ್ವ ವಿರೋಧಿಸಿದ್ದರು. ಇದೇ ವಿಚಾರವಾಗಿ ಏಪ್ರಿಲ್​ 05ರಂದು ಅಧಿಕಾರಿಗಳು ಹಾಗೂ ಮೈಲವ್ವ ನಡುವೆ ಮಾತಿನ ಚಕಮಕಿಯಾಗಿದ್ದು, ಅಧಿಕಾರಿಗಳು ಮೈಲವ್ವ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ.

ಇದನ್ನೂ ಓದಿ: ಖಾಸಗಿ ಬಸ್​ ಪಲ್ಟಿ; ಮೂವರು ಸಾವು, 38ಕ್ಕೂ ಹೆಚ್ಚು ಜನರು ಗಂಭೀರ

ಇದರಿಂದ ಮನನೊಂದಿದ್ದ ಮೈಲವ್ವ ಏಪ್ರಿಲ್​ 05ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮೈಲವ್ವ ದೀದ್ಗಿ ಅವರ ಪುತ್ರ ದುರ್ಗಪ್ಪ ಗ್ರಾಮ ಪಂಚಾಯಿಸಿ ಪಿಡಿಒ ಸೇರಿದಂತೆ ಎಂಟು ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆ ಸಂಬಂಧ ಪಿಡಿಒ ಖಾಜಾಬಾನು, ಗ್ರಾಮಪಂಚಾಯಿತಿ ಅಧ್ಯಕ್ಷ ಉದಯ್ ಚಿಲಗೋಡು, ನರೇಗಾ ಸಿಬ್ಬಂದಿ ಬಸವರಾಜ್, ಪ್ರಕಾಶ್, ಕೊಟ್ರೇಶ್, ಶಿವಕುಮಾರ್, ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. “ನನ್ನ ತಾಯಿಗೆ ಜಾತಿನಿಂದನೆ ಮಾಡಿ ಬಾಯಿಗೆ ಬಂದಂತೆ ಬೈದಿದ್ದಾರೆ. ಇದರಿಂದ ಮನನೊಂದ ನನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ತಾಯಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ದೀದ್ಗಿ ಮೈಲವ್ವ ಪುತ್ರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

See also  ಮುಸ್ಲಿಮರ ಮೀಸಲಾತಿ ದ್ವೇಷ ರಾಜಕೀಯದ ದುರುದ್ದೇಶ ಹೊರತು, ಪ್ರಾಮಾಣಿಕತೆ ಇರಲಿಲ್ಲ: ಸಿದ್ದರಾಮಯ್ಯ
Share This Article