ಟ್ರಕ್‌ಗೆ ಕಾರು ಡಿಕ್ಕಿ; ಐವರು ಉದ್ಯಮಿಗಳು ಸ್ಥಳದಲ್ಲೇ ಸಾವು| Road Accident

car accident
Published on

ಪಾಟ್ನಾ; ನಿನ್ನೆ (ಸೆ.03) ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 5 ಉದ್ಯಮಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ..

ಮೃತರನ್ನು ರಾಜೇಶ್ ಕುಮಾರ್ (ಕುರ್ಜಿ), ಸಂಜಯ್ ಕುಮಾರ್ ಸಿನ್ಹಾ (ಪಟೇಲ್‌ನಗರ), ಕಮಲ್ ಕಿಶೋರ್, ಪ್ರಕಾಶ್ ಚೌರಾಸಿಯಾ ಮತ್ತು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಕೀಟನಾಶಕಗಳು ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರಿಗಳಾಗಿದ್ದರು ಎನ್ನಲಾಗಿದೆ.

ಬೆಳಗಿನ ಜಾವ 1 ಗಂಟೆಗೆ ಈ ಘಟನೆ ಸಂಭವಿಸಿದ್ದು, ಉದ್ಯಮಿಗಳ ಕಾರು ಚಲಿಸುತ್ತಿದ್ದ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕಾರು ಟ್ರಕ್ ಒಳಗೆ ಪ್ರವೇಶಿಸಿದೆ. ಟ್ರಕ್ ಚಾಲಕ ಕಾರನ್ನು 25 ಮೀಟರ್‌ಗಳಷ್ಟು ಎಳೆದೊಯ್ದಿದ್ದಾನೆ. ಪರ್ಸಾ ಬಜಾರ್ ಪೊಲೀಸ್ ಠಾಣೆಯ ಮಹೋಲಿ ಫ್ಲೈಓವರ್ ಅಡಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗ್ಯಾಸ್ ಕಟರ್‌ನಿಂದ ಕಾರನ್ನು ಕತ್ತರಿಸಿ ಎಲ್ಲಾ ಶವಗಳನ್ನು ಹೊರತೆಗೆದಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net