ಧಗಧಗನೆ ಹೊತ್ತಿ ಉರಿಯಿತು ನಾಲ್ವರಿದ್ದ ಕಾರು: ದೇವಸ್ಥಾನದಿಂದ ಮರಳುವಾಗ ಅವಘಡ..

Car
Published on

ಚಿಕ್ಕಬಳ್ಳಾಪುರ: ನಾಲ್ವರು ಪ್ರಯಾಣಿಸುತ್ತಿದ್ದ ಕಾರೊಂದು ಇದ್ದಕ್ಕಿದ್ದಂತೆ ಧಗಧಗನೆ ಹೊತ್ತಿ ಉರಿದು ಆತಂಕದ ವಾತಾವರಣಕ್ಕೆ ಕಾರಣವಾದ ಪ್ರಕರಣವೊಂದು ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ನಗರ ಪೊಲೀಸ್ ಠಾಣೆ ಸಮೀಪದ ಅಂಡರ್​ಪಾಸ್​ನಲ್ಲಿ ಕಾರು ಬರುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಮಾರುತಿ ಕಂಪನಿಯ ಆಲ್ಟೋ ಕಾರು ಇದಾಗಿದ್ದು, ಇದರಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು.

ಕಾರಿನಲ್ಲಿದ್ದವರು ಮುರುಗಮಲ್ಲಾ ದೇವಸ್ಥಾ‌ನಕ್ಕೆ ಹೋಗಿದ್ದರು. ಅದೃಷ್ಟವಶಾತ್​ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಬಹುತೇಕ ಸುಟ್ಟುಹೋಗಿದೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಶಿಡ್ಲಘಟ್ಟ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net