ಕೆಂಪುಕೋಟೆಯ ಬಳಿ ಕಾರು ಸ್ಪೋಟ ದುರಂತ: ದೆಹಲಿ ಪೊಲೀಸ್ ಕಮಿಷನರ್ ಹೇಳಿದ್ದೇನು? ಇಲ್ಲಿದೆ ನೋಡಿ| Car explosion

ವಿಜಯವಾಣಿ - 2025-11-10T211102.599
Published on

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಬಳಿ ಇಂದು(ನ. 10) ಸಂಜೆ 6.30ರ ಸುಮಾರಿಗೆ ಕಾರೊಂದು ಸ್ಫೋಟಗೊಂಡು(Car explosion) 8 ಮಂದಿ ಸಾವನ್ನಪ್ಪಿ, 24 ಜನ ಗಾಯಗೊಂಡ ದುರಂತ ನಡೆದಿದೆ.

ಈ ಕುರಿತು ದೆಹಲಿ ಪೊಲೀಸ್ ಕಮಿಷರ್ ಸತೀಶ್ ಬೋಲ್ಚಾ ಮಾತನಾಡಿದ್ದು, ಇಂದು ಸಂಜೆ 6.52 ರ ಸುಮಾರಿಗೆ ಕೆಂಪು ಕೋಟೆ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ನಿಧಾನವಾಗಿ ಚಲಿಸುತ್ತಿದ್ದ ಕಾರೊಂದು ಸ್ಪೋಟಗೊಂಡಿದೆ. ಮೆಟ್ರೋ ಸ್ಟೇಷನ್ ಸಮೀಪ ಘಟನೆ ನಡೆದಿದೆ.  ಕಾರಿನ ಸ್ಪೋಟದ ತೀವ್ರತೆ ಅತಿಯಾಗಿದ್ದರಿಂದ 4-6 ಕಾರುಗಳಿಗೆ ತೀವ್ರ ಹಾನಿಯಾಗಿದೆ. ಸ್ಪೋಟಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಸದ್ಯ ಸ್ಥಳದಲ್ಲಿ ಎನ್​ಎಸ್​ಜಿ, ವಿಧೀ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮತ್ತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿನ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ. ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಗೃಹ ಸಚಿವರು ಕೂಡ ನಮಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಪ್ರತಿ 20 ನಿಮಿಷಕ್ಕೊಮ್ಮೆ ಇಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಸದ್ಯದ ಮಟ್ಟಿಗೆ ಸಾವಿನ ಸಂಖ್ಯೆ ಅಥವಾ ಗಾಯಾಳುಗಳ ಸಂಖ್ಯೆ ಬಗೆಗಿನ ನಿಖರ ಮಾಹಿತಿ ದೊರೆತಿಲ್ಲ. ನಿಧಾನ ಗತಿಯಲ್ಲಿ ಬಂದಿದ್ದ ಮಾರುತಿ ಕಾರಿನಲ್ಲಿ ಸ್ಪೋಟಗೊಂಡಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಘಟನೆಯ ಹಿನ್ನೆಲೆ

ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಇಂದು(ನ. 10) ಸಂಜೆ 6.30ರ ಸುಮಾರಿಗೆ ಕಾರೊಂದು ಸ್ಫೋಟಗೊಂಡಿದ್ದು, ಪಕ್ಕದಲ್ಲಿ 7ರಿಂದ 8 ಕಾರುಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಸುಮಾರು ಜನ ಗಾಯಗೊಂಡಿದ್ದಾರೆ.

ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ನಂತರ ಪಕ್ಕದಲ್ಲಿದ್ದ 7 ರಿಂದ 8 ವಾಹನಗಳು ಸಹ ಬೆಂಕಿಗೆ ಆಹುತಿಯಾಗಿ ಹಾನಿಯಾಗಿವೆ. ತಕ್ಷಣ ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕದಳ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸಿವೆ. ಗಾಯಾಳುಗಳಮನ್ನು ಹತ್ತಿರದ ಎಲ್​ಎನ್​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net