ಎಲ್ಲರಿಗೂ ಸ್ಥಾನ ನೀಡಲಾಗದು... Karun Nair ಕಡೆಗಣನೆ ಕುರಿತಾಗಿ ಅಜಿತ್​ ಅಗರ್ಕರ್​ ನೀಡಿದ ಸ್ಪಷ್ಟನೆ ಹೀಗಿದೆ

Ajit Karun
Published on

ಮುಂಬೈ: ಫೆಬ್ರವರಿ 19ರಿಂದ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಪಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಿದ್ದು, ಶಮಿ ಕಲುದೀಪ್ ಯಾದವ್​ ಹಾಗೂ ಹಾರ್ದಿಕ್​ ಪಾಂಡ್ಯ ಕಮ್​ಬ್ಯಾಕ್​ ಮಾಡಿದ್ದಾರೆ. ಉಪನಾಯಕನಾಗಿ ಶುಭಮನ್​ ಗಿಲ್​ ಆಯ್ಕೆಯಾಗಿದ್ದು, ಕೆ.ಎಲ್. ರಾಹುಲ್​ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡಿಗರಾಗಿದ್ದಾರೆ.

ನಿನ್ನೆಯಷ್ಟೇ (ಜನವರಿ 18) ಮುಕ್ತಾಯಗೊಂಡ ವಿಜಯ್​ ಹಜಾರೆ ಟ್ರೋಫಿಯಲ್ಲಿ ರನ್​ ಹೊಳೆಯನ್ನೇ ಹರಿಸಿದ್ದ ಕನ್ನಡಿಗ ಕರುಣ್​ ನಾಯರ್​ಗೆ (Karun Nair) ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ಸ್ಪಷ್ಟನೆಯನ್ನು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತಾಗಿ ಮಾತನಾಡಿದ ಅಜಿತ್ ಅಗರ್ಕರ್​, 750ಕ್ಕಿಂತ ಅಧಿಕ ಸರಾಸರಿ ಅಸಾಧಾರಣವಾಗಿದ್ದರೂ, ತಂಡದಲ್ಲಿ 15 ಆಟಗಾರರಿಗೆ ಮಾತ್ರ ಸ್ಥಾನ ನೀಡಲು ಸಾಧ್ಯ. ಎಲ್ಲರಿಗೂ ಸ್ಥಾನ ನೀಡಲಾಗದು. ಈ ರೀತಿಯ ಪ್ರದರ್ಶನಗಳು ಆಗಿಂದಾಗೆ ಆಗುವುದಿಲ್ಲ ಎಂದು ಆಯ್ಕೆ ಅಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ಕರುಣ್​ ನಾಯರ್​ (Karun Nair) ಕಡೆಗಣನೆಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ವಿಜಯ್​ ಹಜಾರೆ ಟ್ರೋಪಿಯಲ್ಲಿ ಕರುಣ್​ ನಾಯರ್​ (Karun Nair) ಪ್ರದರ್ಶನಕ್ಕೆ ಬರುವುದಾದರೆ 7 ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳನ್ನು ಒಳಗೊಂಡಂತೆ 752 ರನ್​ಗಳಿಸಿದ್ದಾರೆ. ಆಡಿರುವ ಬಹುತೇಕ ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿ ಕರುಣ್​ ನಾಟೌಟ್​ ಆಗಿದ್ದು, ಇದು ವಿಶ್ವದಾಖಲೆಯಾಗಿದೆ. ಕರ್ನಾಟಕ ತಂಡ ಟ್ರೋಫಿ ಗೆಲ್ಲುವಲ್ಲಿ ಕರುಣ್​ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರೆ ತಪ್ಪಾಗಲಾರರು.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ಏಕದಿನ ತಂಡ 

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net