

ಬೆಂಗಳೂರು: ಬಾಳೆಹಣ್ಣು ಅಂದ್ರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಭೂರಿ ಭೋಜನವಾದ ಮೇಲೆ ಒಂದೆರೆಡು ಬಾಳೆಹಣ್ಣು ತಿಂದರೆ, ಊಟ ಸಲಿಸಾಗಿ ಜೀರ್ಣವಾಗುತ್ತದೆ ಎಂಬುದು ಈ ಹಿಂದಿನಿಂದಲೂ ನಮ್ಮ ಪೂರ್ವಜರು ಹೇಳಿಕೊಂಡು ಬಂದಿರುವ ಮಾತು. ಅದು ನಿಜವೂ ಹೌದು. ಯಾವುದೇ ಶುಭಕಾರ್ಯಕ್ಕೆ ಆಗಲಿ, ಕಾರ್ಯಕ್ರಮಗಳೇ ಆಗಲಿ ಅಲ್ಲಿ ಬಾಳೆಹಣ್ಣು ಹೆಚ್ಚಾಗಿ ಕಾಣಸಿಗುತ್ತವೆ. ಹಿರಿಯರಿಂದ ಹಿಡಿದು ಮಕ್ಕಳವರೆಗೂ ಬಾಳೆಹಣ್ಣಿನ ಸೇವನೆ ದಿನಚರಿಯ ಭಾಗವಾಗಿದೆ. ದಿನನಿತ್ಯ ಒಂದು ಅಥವಾ ಎರಡು ಪಚ್ಚೆ ಅಥವಾ ಏಲಕ್ಕಿ ಬಾಳೆಹಣ್ಣಿನ ಸೇವಿಸುವ ಅಭ್ಯಾಸ ಅನೇಕರಲ್ಲಿದೆ. ಈ ಪೈಕಿ ಪಚ್ಚೆ ಬಾಳೆ ನೋಡಲು ಹಳದಿ ಬಣ್ಣದಲ್ಲಿ ಸಂಪೂರ್ಣವಾಗಿ ಹಣ್ಣಾಗಿದ್ದರೇ, ಅದರಲ್ಲೂ ಅದು ಕರಗಿಲ್ಲ ಎಂದಾದರೆ ಮಾತ್ರ, ಕೆಲವರು ಸೇವಿಸಲು ಇಷ್ಟಪಡುತ್ತಾರೆ.
ಬಾಳೆಹಣ್ಣು ಕಪ್ಪಿದ್ದರೆ ಅಥವಾ ಅದರ ಮೇಲೆ ಕಪ್ಪು ಚುಕ್ಕೆಗಳು ಎದ್ದಿರುವುದು ಕಂಡುಬಂದರೆ ಅದನ್ನು ಬಿಸಾಡುವವರ ಸಂಖ್ಯೆಯೇ ಅಧಿಕ. ಆದರೆ, ಇಂತಹ ತಪ್ಪನ್ನು ಮಾಡದಿರಿ. ಯಾಕಂದರೆ, ಚುಕ್ಕಿ ಬಂದಿರುವ ಬಾಳೆಹಣ್ಣಿನಲ್ಲಿ ಸಾಧಾರಣ ಹಣ್ಣಿಗಿಂತಲೂ ಹೆಚ್ಚಿನ ಆರೋಗ್ಯ ವರ್ಧಕ ಅಂಶಗಳು ಅಡಗಿವೆ. ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಹಾಗೂ ನೈಸರ್ಗಿಕ ಸಕ್ಕರೆಯನ್ನು ಈ ಹಣ್ಣು ಪೂರೈಸುತ್ತವೆ.
ಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ನೊಂದಿಗೆ ತುಂಬಿದ ಬಾಳೆಹಣ್ಣು ಸುಕ್ರೋಸ್, ಫ್ರುಕ್ಟೋಸ್ ಮತ್ತು ಗ್ಲುಕೋಸ್ ಅಂಶಗಳನ್ನು ಹೊಂದಿದ್ದು, ಫೈಬರ್ನೊಂದಿಗೆ ಸಂಯೋಜಿಸುತ್ತವೆ. ಬಾಳೆಹಣ್ಣು ತ್ವರಿತ, ನಿರಂತರ ಮತ್ತು ಗಣನೀಯ ಪ್ರಮಾಣದ ಶಕ್ತಿಯನ್ನು ನೀಡುತ್ತದೆ. ಕೇವಲ ಎರಡು ಬಾಳೆಹಣ್ಣುಗಳು ದೇಹಕ್ಕೆ ಬೇಕಾದ ಅಗತ್ಯ ಶಕ್ತಿಯನ್ನು ಪೂರೈಸುತ್ತದೆ ಎಂದು ವರದಿ ಹೇಳುತ್ತದೆ.
TNF (ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್): ಬಾಳೆಹಣ್ಣಿನ ಸಿಪ್ಪೆ ಮೇಲಿನ ಕಪ್ಪು ಚುಕ್ಕೆಗಳು ಕೊಳೆತ ಹಣ್ಣಿನ ಸಂಕೇತವಲ್ಲ. ಅದು ಬಾಳೆಹಣ್ಣು ಹಣ್ಣಾಗುವ ಲಕ್ಷಣಗಳಾಗಿವೆ. ಅದರಲ್ಲೂ ಚೆನ್ನಾಗಿ ಹಣ್ಣಾಗಿದೆ ಎಂಬ ಸೂಚನೆ. ಬಾಳೆಹಣ್ಣಿನ ಮೇಲೆ ಕಪ್ಪು-ಕಂದು ಕಲೆಗಳು ಇದ್ದರೆ, ಅದನ್ನು ಸೇವಿಸುವುದು ಉತ್ತಮ. “ಬಾಳೆಹಣ್ಣಿನ ಮೇಲಿನ ಚುಕ್ಕಿಗಳು TNF ಅನ್ನು ಪ್ರತಿನಿಧಿಸುತ್ತವೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹೊಂದಿದೆ. ದೇಹದಲ್ಲಿನ ಅಸಹಜ ಕೋಶಗಳ ವಿರುದ್ಧ ಹೋರಾಡಲು ಹೆಚ್ಚು ಸಹಾಯ ಮಾಡುತ್ತದೆ.
ಬಾಳೆಹಣ್ಣುಗಳು ಸಂಪೂರ್ಣವಾಗಿ ಹಣ್ಣಾದರೆ ಅದು ಹೆಚ್ಚಿನ ಉತ್ಕರ್ಷಣ ನಿರೋಧಕ ಹಣ್ಣು ಎಂದು ಹೇಳಲಾಗುತ್ತದೆ. ಇದು ವೈರಸ್‌ಗಳು ಮತ್ತು ಕ್ಯಾನ್ಸರ್ ಕೋಶಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಕಪ್ಪು ಚುಕ್ಕೆ ಬಾಳೆಹಣ್ಣು ತಿನ್ನಲು ಯೋಗ್ಯವಲ್ಲ ಎಂದು ನೀವು ಭಾವಿಸಿದ್ರೆ ಅದು ತಪ್ಪು. ಖಂಡಿತವಾಗಿಯೂ ಈ ಹಣ್ಣು ದೇಹಕ್ಕೆ ಪೌಷ್ಟಿಕವಾಗಿದೆ. ಮಾಗಿದ ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೆಚ್ಚಾದಂತೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವೂ ಹೆಚ್ಚಾಗುತ್ತದೆ.
ಬಾಳೆಹಣ್ಣುಗಳು ಹೆಚ್ಚು ಹಣ್ಣಾಗುತ್ತಿದ್ದಂತೆ, ಮೆಗ್ನೀಸಿಯಮ್ ಅಂಶವು ಹೆಚ್ಚಾಗುತ್ತದೆ. ಅಧಿಕ ಮೆಗ್ನೀಸಿಯಮ್ ಹೆಚ್ಚು ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಅತ್ಯುತ್ತಮವಾಗಿದೆ ಮತ್ತು ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮಾಗಿದ ಬಾಳೆಹಣ್ಣುಗಳು ಹೃದಯ, ಖಿನ್ನತೆ, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಆರೋಗ್ಯಕರ ಕರುಳಿನ ಚಲನೆಗೆ ಸಹಕಾರಿ.
ಬಾಳೆಹಣ್ಣುಗಳು ನೈಸರ್ಗಿಕ ಆ್ಯಂಟಿ-ಆಸಿಡ್ ಆಗಿದ್ದು, ಎದೆಯುರಿಯನ್ನು ತಕ್ಷಣವೇ ನಿವಾರಿಸಲು ಸಹಾಯ ಮಾಡುತ್ತದೆ. ನೀವು ಸ್ವಲ್ಪ ಎದೆಯುರಿ ಅನುಭವಿಸುತ್ತಿದ್ದರೆ, ಒಂದು ಬಾಳೆಹಣ್ಣು ಸೇವಿಸಿ ಅದು ಕೆಲವೇ ನಿಮಿಷಗಳಲ್ಲಿ ನಿಮ್ಮ ಪರಿಹಾರವನ್ನು ನೀಡುತ್ತದೆ.
ಮಾಗಿದ ಬಾಳೆಹಣ್ಣುಗಳನ್ನು ತಿನ್ನುವುದು ರೋಗಲಕ್ಷಣಗಳನ್ನು ನಿಯಂತ್ರಣಕ್ಕೆ ತರುತ್ತದೆ ಮತ್ತು ವಿವಿಧ ಕಾರಣಗಳಿಂದ ಉಂಟಾಗುವ ಅತಿಸಾರದಿಂದ ಚೇತರಿಸಿಕೊಳ್ಳುವ ಸಮಯವನ್ನು ದ್ವಿಗುಣಗೊಳಿಸುತ್ತದೆ. ಬಾಳೆಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯ ನಿವಾರಿಸಲು ಸಹಕಾರಿ,(ಏಜೆನ್ಸೀಸ್).