

ಕೇಂದ್ರ ಸರ್ಕಾರ ನಿನ್ನೆ ಟಿಕ್ಟಾಕ್, ಕ್ಯಾಮ್ಸ್ಕ್ಯಾನರ್ ಸೇರಿ ಚೀನಾ ಮೂಲದ 59 ಆ್ಯಪ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಚೀನಾ ಮೂಲದ ಇನ್ಸ್ಟಿಗ್ ಕಂಪನಿಯ ಉತ್ಪನ್ನ ಕ್ಯಾಮ್ಸ್ಕ್ಯಾನರ್. ಜಾಗತಿಕವಾಗಿ 10 ಕೋಟಿ ಡೌನ್ಲೋಡ್ ಆಗಿರುವ ಈ ಆ್ಯಪ್, 2020ರ ಏಪ್ರಿಲ್ ಒಂದೇ ತಿಂಗಳಲ್ಲಿ 80 ಲಕ್ಷ ಡೌನ್ಲೋಡ್ ಆಗಿತ್ತು. ನಿಷೇಧಕ್ಕೆ ಒಳಗಾಗಿರುವ ಈ ಜನಪ್ರಿಯ ಆ್ಯಪ್ಗೆ ಪರ್ಯಾಯವಾಗಿ ನಾವು ಯಾವ್ಯಾವ ಆ್ಯಪ್ಗಳನ್ನು ಬಳಸಬಹುದು. ಇಲ್ಲಿವೆ ಕೆಲವು ಆಯ್ದ ಆ್ಯಪ್ಗಳು. ಕ್ಯಾಮ್ಸ್ಕ್ಯಾನರ್ ರೀತಿಯಲ್ಲೇ ಈ ಆ್ಯಪ್ಗಳಲ್ಲೂ ಪಿಡಿಎಫ್ ಮತ್ತು ಇತರೆ ಫಾರ್ಮ್ಯಾಟ್ಗಳಿಗೆ ಕನ್ವರ್ಟ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಸ್ಟೋರ್ಗಳಲ್ಲಿ ಇವು ಲಭ್ಯ ಇವೆ.
1. ಅಡೋಬ್ ಸ್ಕ್ಯಾನ್ (ಅಡೋಬ್)- ಅಮೆರಿಕ ಮೂಲದ ಅಡೋಬ್ ಕಂಪನಿಯ ಆ್ಯಪ್ ಇದು. ಫೋಟೊ ಎಡಿಟಿಂಗ್, ವಿಡಿಯೋ ಎಡಿಟಿಂಗ್ ತಂತ್ರಾಂಶಗಳಿಗೆ ಫೇಮಸ್ ಆಗಿರುವ ಕಂಪನಿ ಇದು.
2. ಮೈಕ್ರೋಸಾಫ್ಟ್ ಆಫೀಸ್ ಲೆನ್ಸ್- ಟೆಕ್ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್ನ ಪಿಡಿಎಫ್ ಸ್ಕ್ಯಾನರ್ ಆ್ಯಪ್ ಇದು. ಮೈಕ್ರೋಸಾಫ್ಟ್ನ ಇತರೆ ಆ್ಯಪ್ಗಳ ಜತೆಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ.
3. ಫೋಟೋಸ್ಕ್ಯಾನ್ - ಇದು ಗೂಗಲ್ನ ಆ್ಯಪ್. ಗೂಗಲ್ ಡ್ರೈವ್ ಮತ್ತು ಆಂಡ್ರಾಯ್ಡ್ ಫೋನ್ಗಳಲ್ಲಿ ಇದು ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಗೂಗಲ್ ಫೋಟೋಸ್ ಜತೆಗೆ ಚೆನ್ನಾಗಿ ಹೊಂದಿಕೊಳ್ಳುವ ಕಾರಣ, ಅಲ್ಲಿಂದ ನಿಮ್ಮ ಡಾಕ್ಯುಮೆಂಟ್ನ ಇಮೇಜ್ಗಳನ್ನ ಯಾವುದೇ ಸಮಯದಲ್ಲೂ ಪಡೆಯಬಹುದಾಗಿದೆ.
4. ಸ್ಕ್ಯಾನರ್ ಆ್ಯಪ್ - ಅಮೆರಿಕದ ಬಿಪಿಮೊಬೈಲ್ ಕಂಪನಿಯ ಉತ್ಪನ್ನ ಇದು. ಈ ಕಂಪನಿಯೇನೂ ಜನಪ್ರಿಯವಾದುದಲ್ಲ. ಈ ಆ್ಯಪ್ನಲ್ಲಿ ಇಲೆಕ್ಟ್ರಾನಿಕ್ ಸಿಗ್ನೇಚರ್ ಫೀಚರ್, ಪಿನ್ ಪ್ರೊಟೆಕ್ಷನ್ ಫೀಚರ್ ಗಮನಸೆಳೆಯುವಂತಿದೆ. ಇದು ಬೇಸಿಕ್ ಡಾಕ್ಯುಮೆಂಟ್ ಎಡಿಟರ್ ಆಗಿ ಉತ್ತಮ ಫಲಿತಾಂಶ ನೀಡುತ್ತದೆ.
5. ಟ್ಯಾಪ್ಸ್ಕ್ಯಾನರ್ - ಇಸ್ರೇಲ್ನ ಸ್ಮಾರ್ಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ನ ಉತ್ಪನ್ನ ಇದು. ಗೂಗಲ್ ಡ್ರೈವ್, ಡ್ರಾಪ್ಬಾಕ್ಸ್ ಮತ್ತು ಇತರೆ ಕ್ಲೌಡ್ ಸೇವೆಗಳ ಜತೆಗೆ ಹೊಂದಿಕೊಳ್ಳುತ್ತದೆ. ಎಲ್ಲದಕ್ಕೂ ಹೆಚ್ಚಾಗಿ ಇದರಲ್ಲಿ ಕ್ಯೂಆರ್ ಸ್ಕ್ಯಾನರ್ ಫೀಚರ್ ಸೇರಿಕೊಂಡಿದೆ.