ಎಣ್ಣೆಗಾಗಿ ನೆರೆ ರಾಜ್ಯದ ಗಡಿ ದಾಟಿ ಬಂದ ಮದ್ಯ ಪ್ರಿಯರು

anekal drink
Published on

ಆನೇಕಲ್: ನೆರೆ ರಾಜ್ಯ ತಮಿಳುನಾಡಿನ ಗಡಿ ಪ್ರದೇಶದ ಜನರು ಮದ್ಯ ಖರೀದಿಗಾಗಿ ಆನೇಕಲ್​ಗೆ ಆಗಮಿಸಿರುವುದರಿಂದ ಇಡೀ ಪಟ್ಣಣ ಜನಜಂಗುಳಿಯಿಂದ ಕೂಡಿದೆ. ಅಲ್ಲದೆ ಮದ್ಯದ ಅಂಗಡಿಗಳ ಮುಂದೆ ಕಿಲೋಮೀಟರ್​ ದೂರದ ಸಾಲುಗಳು ಕಂಡು ಬಂದಿದೆ.

ಆನೇಕಲ್​, ಅತ್ತಿಬೆಲೆ ಗಡಿಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಿಂದ ಜನರು ತಂಡೋಪವಾಗಿ ಆಗಮಿಸಿದ್ದಾರೆ.

ಜನರು ಗುಂಪು, ಗುಂಪಾಗಿ ಬೆಳಗ್ಗೆಯೇ ಪಟ್ಟಣಕ್ಕೆ ಆಗಮಿಸಿ ಮದ್ಯದ ಅಂಗಡಿಗಳ ಮುಂದೆ ಸಾಲು ನಿಂತರು. ಗಡಿ ಗ್ರಾಮದ ಜನರು ಮದ್ಯಕ್ಕಾಗಿ ದೂರದ ಹೊಸೂರಿಗೆ ತೆರಳಬೇಕಾಗಿರುವ ಹಿನ್ನೆಲೆಯಲ್ಲಿ ಹತ್ತಿರ ಇರುವ ಆನೇಕಲ್​ಗೆ ಆಗಮಿಸಿದ್ದಾರೆ.

ಇದರಿಂದ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿದೆ. ಮದ್ಯದ ಅಂಗಡಿಗಳು ಸಾಮಾಜಿಕ ಅಂತರ ಕಾಪಾಡಲು ಕಟ್ಟುನಿಟ್ಟಿನ ಸೂಚನೆ ಪಾಲಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net