

Cab driver: ಉತ್ತರ ದೆಹಲಿ ಮೌರಿಸ್ ನಗರ ಪ್ರದೇಶದಲ್ಲಿ ಕ್ಯಾಬ್ನಲ್ಲಿ ಪ್ರಯಾಣಿಸುವಾಗ ಕ್ಯಾಬ್ ಚಾಲಕ ಯುವತಿಯ ಎದುರು ಅನುಚಿತ ವರ್ತನೆ(ಹಸ್ತ ಮೈಥುನ) ಮಾಡಿದ ಆರೋಪದ ಮೇಲೆ 48 ವರ್ಷದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸೋಮವಾರ 22 ವರ್ಷದ ವಿದ್ಯಾರ್ಥಿನಿ ಕಾಲೇಜಿಗೆ ಹೋಗಲು ರಾಪಿಡೋ ಕ್ಯಾಬ್ ಬುಕ್ ಮಾಡಿದಾಗ ಈ ಘಟನೆ ನಡೆದಿದ್ದು, ಲೋಮ್ ಶಂಕರ್ ಎಂದು ಗುರುತಿಸಲಾದ ಚಾಲಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ ಮತ್ತು ನಂತರ ವಾಹನದಲ್ಲಿ ಕುಳಿತಿದ್ದಾಗ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅವಳನ್ನು ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಹೇಳಿದ ಬಳಿಕ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ರಾಜಾ ಬಂಥಿಯಾ ಹೇಳಿದರು.(ಏಜೆನ್ಸೀಸ್)