

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಾಂವಿಧಾನಿಕ ಹಾಗೂ ಕಾನೂನುಬದ್ಧವಾಗಿದೆ. ಪೌರತ್ವ ಕುರಿತಂತೆ ಶಾಸನ ರಚಿಸುವ ಪರಮಾಧಿಕಾರ ಸಂಸತ್ತಿಗೆ ಮಾತ್ರ ಇದೆ. ಆದ್ದರಿಂದ ಇದರ ಸಿಂಧುತ್ವವನ್ನು ಕೋರ್ಟ್ನಲ್ಲಿ ಪ್ರಶ್ನಿಸಲಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಹೇಳಿದೆ.
ಸಂವಿಧಾನದ 246ನೇ ವಿಧಿಯಲ್ಲಿ ವಿವರಿಸಿರುವಂತೆ ಸಂವಿಧಾನದ 7ನೇ ಪರಿಚ್ಛೇದ 1ನೇ ಪಟ್ಟಿಯಲ್ಲಿ ನಮೂದಾಗಿರುವ ಅಂಶಗಳ ಕುರಿತಂತೆ ಶಾಸನ ರಚನೆ ಅಥವಾ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. 7ನೇ ಪರಿಚ್ಛೇದ 17ನೇ ಅಂಶವು ಪೌರತ್ವ ಮತ್ತು ವಿದೇಶಿಯರನ್ನು ಗುರುತಿಸುವಿಕೆ ಸಂಬಂಧಿಸಿದ್ದಾಗಿದೆ ಎಂದು ಸಿಎಎ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬಂಧ ಸಲ್ಲಿಸಿರುವ ಪ್ರಾಥಮಿಕ ಅಫಿಡವಿಟ್ನಲ್ಲಿ ಕೇಂದ್ರ ತಿಳಿಸಿದೆ.
ಭಾರತದ ನಾಗರಿಕರ ಕಾನೂನಾತ್ಮಕ, ಭೌಗೋಳಿಕ ಮತ್ತು ಜಾತ್ಯತೀತ ಹಕ್ಕಿಗೆ ಸಿಎಎ ಚ್ಯುತಿ ಉಂಟು ಮಾಡುವುದಿಲ್ಲ. ಯಾರದ್ದೇ ಪೌರತ್ವನ್ನು ಕಸಿದುಕೊಳ್ಳುವುದಿಲ್ಲ. ಬದಲಿಗೆ ಇದು ಪೌರತ್ವವನ್ನು ನೀಡುತ್ತದೆ ಎಂದು ಹೇಳಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಲ್ಲಿ ಧಾರ್ವಿುಕ ಕಾರಣಕ್ಕೆ ಶೋಷಣೆಗೆ ಒಳಗಾಗಿ ಭಾರತಕ್ಕೆ ವಲಸೆ ಬಂದ ಮಸ್ಲಿಮೇತರ ಆರು ಸಮುದಾಯದವರಿಗೆ ಪೌರತ್ವವನ್ನು ಸಿಎಎ ಕಲ್ಪಿಸುತ್ತದೆ.