ವಿಜಯವಾಣಿ ಸುದ್ದಿಜಾಲ ಬೈಂದೂರು
ಹಾಲಿನ ಶುದ್ಧತೆಗೆ ಮಹತ್ವ ಕೊಡುವುದಲ್ಲದೇ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡುವುದರಿಂದ ಹೈನುಗಾರರಿಗೆ ಹೆಚ್ಚು ಲಾಭಗಳಿಸಲು ಸಹಕಾರಿ ಎಂದು ದ.ಕ. ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ರಾಜಾರಾಮ ಹೇಳಿದರು.
ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬೈಂದೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಮಾತನಾಡಿದರು.
ಬೈಂದೂರು ಹಾಲು ಉತ್ಪಾದಕರ ಸಹಕಾರ ಸಂಘ ಕಳೆದ 38 ವಷರ್ಗಳಿಂದ ಅತೀ ಹೆಚ್ಚು ಹಾಲು ಸಂಗ್ರಹಣೆಯಲ್ಲಿ ಮುಂಚೂಣಿಯ ಸಾಧನೆೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷ ಬಿ.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿ, ಸಂಘ ಕಳೆದ ಸಾಲಿನಲ್ಲಿ ಸುಮಾರು 4.29 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.18 ಡೆವಿಡೆಂಡ್ ನೀಡಲಾಗುವುದು ಎಂದರು.
ಸಂಘದ ಕಾರ್ಯನಿರ್ವಹಣಾಕಾರಿ ಲಲಿತಾ ಪೂಜಾರಿ 2023-24ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಮಹಾಬಲೇಶ್ವರ ದೇವಾಡಿಗ, ನಿರ್ದೇಶಕ ಮಂಡಳಿ ಸದಸ್ಯರಾದ ವಿ.ಟಿ.ಅಬ್ರಹಂ(ದಾಸ್), ಮಂಜಪ್ಪ ಎ., ನಿತ್ಯಾನಂದ ಎಸ್., ದಾಸಪ್ಪ ಹವಾಲ್ದಾರ್, ನಾರಾಯಣ ಶೆಟ್ಟಿ ಮದ್ದೋಡಿ, ಸಾವಿತ್ರಿ ಶೆಡ್ತಿ, ಇಂದಿರಾ ಶೆಡ್ತಿ ಉಪಸ್ಥಿತರಿದ್ದರು. ಉಪನ್ಯಾಸಕ ಗುರುರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ, ನುಡಿನಮನ
38 ವರ್ಷಗಳಿಂದ ಸಂಘದ ಕಾರ್ಯನಿರ್ವಹಣಾಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಸಂಘದ ಮಾಜಿ ಅಧ್ಯಕ್ಷ ಹೊಸಾಡು ಸುಬ್ರಾಯ ಶೇರುಗಾರ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.