More

    ಕರೊನಾ ಲಾಕ್​ಡೌನ್​ ಅವಧಿ-ಜಲಮಂಡಳಿ ಬಿಲ್ ಸಂಗ್ರಹದಲ್ಲಿ ಏರಿಕೆ

    ಬೆಂಗಳೂರು: ಲಾಕ್​ಡೌನ್ ಸಡಿಲಿಕೆಯಿಂದ ಜಲಮಂಡಳಿ ಬಾಕಿ ಬಿಲ್​ನ ಹಣ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಪ್ರತಿ ತಿಂಗಳು ಗೃಹಬಳಕೆ, ವಾಣಿಜ್ಯ ಕಟ್ಟಡಗಳಿಂದ 120 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗುತ್ತಿತ್ತು. ಈ ತಿಂಗಳು ಗ್ರಾಹಕರಿಂದ 103 ಕೋಟಿ ರೂ. ಬಿಲ್ ಮೊತ್ತ ಪಾವತಿಯಾಗಿದೆ.

    ಇದನ್ನೂ ಓದಿ: ಸಂಕಷ್ಟದಲ್ಲಿವೆ ಶಾಪಿಂಗ್ ಮಾಲ್​ಗಳು; ಸಾವಿರಾರು ಜನರ ಉದ್ಯೋಗಕ್ಕೂ ಕುತ್ತು

    ಕಳೆದೆರಡು ತಿಂಗಳಿಂದ ಸರಿಯಾಗಿ ಪಾವತಿಯಾಗದೆ ಜಲಮಂಡಳಿಗೆ ಆದಾಯ ಕೊರತೆಯಾಗಿತ್ತು. ಲಾಕ್​ಡೌನ್ ಘೋಷಣೆ ನಂತರ ಲಕ್ಷಾಂತರ ಜನರು ಸ್ವಂತ ಊರಿನತ್ತ ಪ್ರಯಾಣ ಬೆಳೆಸಿದ್ದರು. ಇದರಿಂದ ಫೆಬ್ರವರಿ, ಮಾರ್ಚ್ ಬಾಕಿ ನೀರಿನ ಬಿಲ್ ಪಾವತಿ ಸರಿಯಾಗಿ ಆಗಿರಲಿಲ್ಲ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘

    ಇದನ್ನೂ ಓದಿ: ಮಳೆಯ ಅಬ್ಬರಕ್ಕೆ ಬೆದರಿದ ರಾಜಧಾನಿ

    ಆನ್​ಲೈನ್ ಮೂಲಕ 40 ಕೋಟಿ ರೂ.: ನೀರಿನ ‘ಮೀಟರ್ ರೀಡರ್ ’ಗಳು ಮನೆಮನೆಗೆ ತೆರಳಿ ರಸೀದಿ ನೀಡುತ್ತಿದ್ದರು. ಗ್ರಾಹಕರು ಜಲಮಂಡಳಿಯ ಕಿಯೋಸ್ಕ್​ಗಳಲ್ಲಿ ಬಿಲ್ ಪಾವತಿಸುತ್ತಿದ್ದರು. ಇನ್ನು ಕೆಲವರು ಬೆಂಗಳೂರು ಒನ್ ಸೇವಾ ಕೇಂದ್ರದಲ್ಲಿ ಬಾಕಿ ಬಿಲ್ ಶುಲ್ಕ ಪಾವತಿಸುತ್ತಿದ್ದರು. ಕರೊನಾ ಸೋಂಕು ಅತಂಕದಿಂದಾಗಿ ಮೀಟರ್ ರೀಡರ್​ಗಳು ಏಪ್ರಿಲ್​ನಲ್ಲಿ ಮನೆಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆನ್​ಲೈನ್​ನಲ್ಲಿ ಪ್ರತಿ ತಿಂಗಳು 20ರಿಂದ 25 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಲಾಕ್​ಡೌನ್ ಹಿನ್ನೆಲೆ ಏಪ್ರಿಲ್​ನಲ್ಲಿ ಆನ್​ಲೈನ್ ಮೂಲಕ 40 ಕೋಟಿ ರೂ. ಸಂಗ್ರಹವಾಗಿದೆ.

    ಕಾರ್ವಿುಕರ ಕೆಲಸದ ಅವಧಿ ಹೆಚ್ಚಳ ಪ್ರಶ್ನಿಸಿ ಪಿಐಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts