ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿ ಪೈ ಅಸಮಾಧಾನ; ಲೇವಡಿ ಮಾಡಿದ ಕೆಪಿಸಿಸಿ

Congress
Published on

ಬೆಂಗಳೂರು: ಕೇಂದ್ರದ ಬಿಜೆಪಿ ಧೋರಣೆ ಕರ್ನಾಟಕದ ಉದ್ಯಮಿಗಳಿಗೆ ಈಗ ಜ್ಞಾನೋದಯ ಆಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.

ಉದ್ಯಮಿ ಮೋಹನ್ ದಾಸ್ ಪೈ ಅವರ ಜಾಲತಾಣದಲ್ಲಿ ನೀಡಿದ ಅಭಿಪ್ರಾಯವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ರಮೇಶ್ ಬಾಬು, ಎಲ್ಲಾ ಹಂತದಲ್ಲಿ ಕೇಂದ್ರ ಬಿಜೆಪಿ ಕರ್ನಾಟಕ ಮತ್ತು ದಕ್ಷಿಣ ರಾಜ್ಯಗಳ ವಿರುದ್ಧ ವ್ಯವಸ್ಥಿತವಾಗಿ ಶೋಷಣೆ ಮಾಡುತ್ತಿದೆ ಇದರ ವಿರುದ್ಧ ಕನ್ನಡಿಗರು ದಕ್ಷಿಣದ ಜನರು ಧ್ವನಿಎತ್ತದೆ ಹೋದರೆ ಅಪಾಯ ನಿಶ್ಚಿತ ಒಕ್ಕೂಟ ವ್ಯವಸ್ಥೆ ಆರೋಗ್ಯಕರವಾಗಿ ಉಳಿಸುವ ಪ್ರಯತ್ನ ಆಗಲಿ ಎಂದಿದ್ದಾರೆ.

ಕೇಂದ್ರ ಸರ್ಕಾರವು ಕಾನ್ಪುರ, ದೆಹಲಿ, ರೂಪಾರ್‌ನಲ್ಲಿ ಕೃತಕ ಬುದ್ಧಿ ಮತ್ತೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಂಸ್ಥೆಯನ್ನು ೋಷಿಸಿದ ಬೆನ್ನಲ್ಲೇ ಮೋಹನ್ ದಾಸ್ ಪೈನ ತಮ್ಮ ಅಸಮಾಧಾನ ಹೊರಹಾಕಿ ಪ್ರತಿಕ್ರಿಯೆ ನೀಡಿದ್ದರು.

ಭಾರತದ ಐಟಿ ಕ್ಯಾಪಿಟಲ್ ಬೆಂಗಳೂರಿನಲ್ಲಿ ಏನಿಲ್ಲ? ನೀವು ಯಾಕೆ ಮತ್ತು ಅಶ್ವಿನಿ ವೈಷ್ಣವ್ ಬೆಂಗಳೂರನ್ನು ಹಾಗೂ ದಕ್ಷಿಣ ಭಾರತವನ್ನು ಕಡೆಗಣಿಸುತ್ತೀದ್ದೀರಿ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಪ್ರಶ್ನಿಸಿದ್ದರು.

ಅವರ ಆಕ್ರೋಶ ಅಷ್ಟಕ್ಕೆ ಸೀಮಿತವಾಗದೇ, ನಾವೂ ಭಾರತದ ಭಾಗವಲ್ಲವೇ? ಬೆಂಗಳೂರು ಎನ್‌ಡಿಎಗೆ ಮತ ಹಾಕಿದೆ. ಆದರೆ ನಮ್ಮ ಬಗ್ಗೆ ಮಲತಾಯಿ ಧೋರಣೆ. ಪದೇ ಪದೆ ನಮ್ಮನ್ನು ನಿರ್ಲಕ್ಷಿಸುತ್ತಿರುವ ನಿಮ್ಮ ಬಗ್ಗೆ ಇಲ್ಲಿನ ಜನರು ಕೋಪ ಮತ್ತು ಅಸಮಾಧಾನಗೊಂಡಿದ್ದಾರೆ. ಮಧ್ಯಪ್ರವೇಶಿಸಿ, ನಮಗೂ ನಮ್ಮ ಪಾಲನ್ನು ಕೊಡಿ ಎಂದು ಒತ್ತಾಯಿಸಿದ್ದಾರೆ. ಜತೆಗೆ ಸಂಸದ ತೇಜಸ್ವಿಸೂರ್ಯ, ಸಚಿವ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ಅವರನ್ನು ಎಚ್ಚರಿಸಿದ್ದಾರಲ್ಲದೇ, ನಮ್ಮ ಸಂಸದರು ಮಾಡುತ್ತಿದ್ದಾರೆ? ಎನ್‌ಡಿಎಗೆ ಮತ ಹಾಕಿದ್ದಕ್ಕೆ ನಮ್ಮ ರಾಜ್ಯ ಸರ್ಕಾರವೂ ನಮ್ಮನ್ನು ಕಡೆಗಣಿಸುತ್ತಿದೆ. ಬೆಂಗಳೂರಿನಲ್ಲಿ ಸಾಕಷ್ಟು ಹೂಡಿಕೆ ಇಲ್ಲ ಎಂದೂ ಸಹ ಅಸಮಾಧಾನ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net