ಬಸ್​ಗಾಗಿ ಪ್ರಯಾಣಿಕರು ಕಾಯೋದು ಸಾಮಾನ್ಯವಾದ್ರೆ, ಇಲ್ಲಿ ಪ್ರಯಾಣಿಕರಿಗಾಗಿ ಬಸ್​ಗಳೇ ಕಾಯುತ್ತಿವೆ!

Mandya Bus
Published on

ಮಂಡ್ಯ: ಬಸ್​ಗಾಗಿ ಪ್ರಯಾಣಿಕರು ಕಾಯೋದು ಸಾಮಾನ್ಯ. ಆದರೆ, ಇಂದು ಪ್ರಯಾಣಿಕರಿಗಾಗಿ ಬಸ್​ಗಳೇ ಕಾಯುತ್ತಿವೆ. ಹೌದು, ಸಕ್ಕರೆ ನಾಡಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ಕೆಎಸ್​ಆರ್​ಟಿಸಿ ಬಸ್​ಗಳು ಸಾಲುಗಟ್ಟಿ ನಿಂತಿವೆ.

ಬೆಳಗ್ಗೆಯಿಂದ ಈವರೆಗೆ ಕೇವಲ 15 ಬಸ್​ಗಳು ಮಾತ್ರ ಪ್ರಯಾಣಿಕರನ್ನು ಕರೆದೊಯ್ದಿದೆ. ಬೆಂಗಳೂರು ಹಾಗೂ ಮೈಸೂರಿಗೆ ಮಾತ್ರ ಬಸ್ ಸಂಚಾರ ಇದೆ. ಪ್ರಯಾಣಿಕರಿಲ್ಲದೇ ತಾಲೂಕು ಕೇಂದ್ರಗಳಿಗೂ ಬಸ್​ಗಳು ತೆರಳಲು ಸಾಧ್ಯವಾಗಿಲ್ಲ.

ಇವತ್ತು ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ತಾಲೂಕು ಕೇಂದ್ರಗಳಿಗೆ ತೆರಳಲು ಪ್ರಯಾಣಿಕರು ಬಾರದೇ ಇರುವ ಹಿನ್ನೆಲೆಯಲ್ಲಿ ಒಂದೇ ಒಂದು ತಾಲೂಕು ಕೇಂದ್ರಕ್ಕೂ ಬಸ್​ಗಳು ತೆರಳಿಲ್ಲ.

ಒಂದು ಮಾರ್ಗಕ್ಕೆ ಕನಿಷ್ಠ 10 ರಿಂದ 15 ಜನ ಪ್ರಯಾಣಿಕರಿದ್ದರೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದರೆ ಆ ಮಾರ್ಗಕ್ಕೆ ಬಸ್ ಕಳುಹಿಸುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net