VIDEO | ಬುರ್ಜ್ ಖಲೀಫಾ ಮೇಲೆ ಮಿಂಚಿದ ಕೋಲ್ಕತ ನೈಟ್‌ರೈಡರ್ಸ್‌!

post_image_426b089
Published on

ದುಬೈ: ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ ನೈಟ್‌ರೈಡರ್ಸ್‌ ತಂಡ ಕೊನೆಯ ತಂಡವಾಗಿ ಬುಧವಾರ ಐಪಿಎಲ್ 13ನೇ ಆವೃತ್ತಿಗೆ ಎಂಟ್ರಿ ಕೊಡಲಿದೆ. ಇದಕ್ಕೆ ಪೂರ್ವಭಾವಿಯಾಗಿ ಯುಎಇಯ ಪ್ರತಿಷ್ಠಿತ ಹಾಗೂ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಲಾಂಛನ ಮತ್ತು ಆಟಗಾರರ ಚಿತ್ರ ಎಲ್‌ಇಡಿ ಬೆಳಕಿನಲ್ಲಿ ಕಂಗೊಳಿಸಿದೆ.

ಅರಬ್ ರಾಷ್ಟ್ರದಲ್ಲಿ ಕೆಕೆಆರ್ ಈ ಗೌರವ ಪಡೆದ ಮೊದಲ ಐಪಿಎಲ್ ತಂಡವೆನಿಸಿದೆ. ಬುರ್ಜ್ ಖಲೀಫಾ ಮೇಲೆ ಮಂಗಳವಾರ ರಾತ್ರಿ ಕೆಕೆಆರ್ ತಂಡದ ಲಾಂಛನ ಮತ್ತು ಆಟಗಾರರ ಚಿತ್ರ ಮೂಡಿ ಬಂದಿರುವ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ದಿನೇಶ್ ಕಾರ್ತಿಕ್ ಸಾರಥ್ಯದ ಕೆಕೆಆರ್ ತಂಡ ಬುಧವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುವ ಮೂಲಕ ಐಪಿಎಲ್ ಅಭಿಯಾನ ಆರಂಭಿಸಲಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪಂದ್ಯಕ್ಕೆ ಪೂರ್ವಭಾವಿಯಾಗಿ ಕೆಕೆಆರ್ ತಂಡಕ್ಕೆ ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net