

ದಕ್ಷಿಣ ಕೆರೊಲಿನಾ: ಕಸದ ತೊಟ್ಟಿಯಲ್ಲಿ ಬೀಸಾಕಿದ್ದ ಸ್ನಾಕ್ಸ್ನ್ನು ಗ್ರಾಹಕರಿಗೆ ನೀಡಿರುವ ಘಟನೆ ಯುಎಸ್ನ ದಕ್ಷಿಣ ಕೆರೊಲಿನಾದಲ್ಲಿ ನಡೆದಿದೆ.
ಇದನ್ನೂ ಓದಿ: 20 ರೂ.ಗೆ ಊಟ ಮತ್ತು 50 ರೂ.ಗೆ ಸ್ನಾಕ್ಸ್: ಸಾಮಾನ್ಯ ರೈಲು ಪ್ರಯಾಣಿಕರಿಗೂ ಶೀಘ್ರದಲ್ಲೇ ಆಹಾರ ವ್ಯವಸ್ಥೆ
ಘಟನೆಗೆ ಸಂಬಂಧಿಸದಂತೆ ಜೇಮ್ ಕ್ರಿಸ್ಟೀನ್ ಮೇಜರ್(39) ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆ ಕಸದ ತೊಟ್ಟಿಯಿಂದ ಸ್ನಾಕ್ಸ್ತೆಗೆದುಕೊಂಡು ತಾಜಾ ಸ್ನಾಕ್ಸ್ ಇಟ್ಟಿದ್ದ ಕಂಟೇನರ್ಗೆ ಸೇರಿಸುವುದರ ಜತೆಗೆ ಅವುಗಳನ್ನೇ ಗ್ರಾಹಕರಿಗೆ ನೀಡಿದ್ದಾಳೆ.
ಘಟನೆ ಹಿನ್ನೆಲೆ:
ಜುಲೈ 9ರಂದು ಶಾಪ್ನ ಔಟ್‌ಲೆಟ್‌ನಲ್ಲಿ ಇಬ್ಬರು ಮಹಿಳೆಯರು ಸಿಬ್ಬಂದಿಯೊಂದಿಗೆ ಜಗಳವಾಡುತ್ತಿದ್ದರು. ಆ ವೇಳೆ ಡಂಕನ್ ಬೈಪಾಸ್‌ನಲ್ಲಿರುವ ಬರ್ಗರ್ ಕಿಂಗ್ ಔಟ್‌ಲೆಟ್‌ಗೆ ಯೂನಿಯನ್ ಪೋಲೀಸ್ ಇಲಾಖೆ ಅಧಿಕಾರಿಗಳನ್ನು ಕರೆಯಿಸಲಾಗಿತ್ತು. ಈ ವೇಳೆ ಮಹಿಳೆಯರು ಬಿಸಿಯಾದ ಸ್ನಾಕ್ಸ್ ಜತೆಗೆ ಕಳಪೆ ಸ್ನಾಕ್ಸ್ನ್ನು ಮಿಕ್ಸ್ ಮಾಡಿ ನೀಡಲಾಗಿದೆ ಎಂದು ಬರ್ಗರ್ ಕಿಂಗ್ ಪ್ರಧಾನ ಕಛೇರಿಗೆ ದೂರು ನೀಡಿದ್ದರು.
ಬರ್ಗರ್ ಕಿಂಗ್ ಪ್ರಧಾನ ಕಛೇರಿಯು ಇದನ್ನು ಪತ್ತೆ ಹಚ್ಚಿ ಎರಡು ದಿನಗಳ ನಂತರ ಪೋಲೀಸರಿಗೆ ಕರೆ ಮಾಡಿ, ಔಟ್‌ಲೆಟ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿರುವ ಜೇಮ್ ಕ್ರಿಸ್ಟಿನ್ ಮೇಜರ್ ಅವರು ಗ್ರಾಹಕರಿಗೆ ಕಸದ ತೊಟ್ಟಿಯಿಂದ ಫ್ರೈಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದೆ. ಸುದ್ದಿಯನ್ನು ತಿಳಿದ ಕೂಡಲೇ ಅಧಿಕಾರಿಗಳು ಸ್ಪಂದಿಸಿ ಆಕೆಯನ್ನು ಬಂಧಿಸಿದ್ದಾರೆ.
ಆದರೆ ಜುಲೈ 19ರಂದು 20,000 ಡಾಲರ್ ಮೊತ್ತದ ಬಾಂಡ್‌ನೊಂದಿಗೆ ಆಕೆಯನ್ನು ಬಿಡುಗಡೆ ಮಾಡಲಾಗಿದ್ದು, ತಪ್ಪಿತಸ್ಥಳೆಂದು ಸಾಬೀತಾದರೆ ಆ ರಾಜ್ಯದ ಕಾನೂನಿನ ಪ್ರಕಾರ ಆಕೆ 20 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬಹುದಾಗಿದೆ.(ಏಜೆನ್ಸೀಸ್)