More

    20 ರೂ.ಗೆ ಊಟ ಮತ್ತು 50 ರೂ.ಗೆ ಸ್ನಾಕ್ಸ್​​​: ಸಾಮಾನ್ಯ ರೈಲು ಪ್ರಯಾಣಿಕರಿಗೂ ಶೀಘ್ರದಲ್ಲೇ ಆಹಾರ ವ್ಯವಸ್ಥೆ

    ದೆಹಲಿ: ಭಾರತೀಯ ರೈಲ್ವೇಯು ತನ್ನ ಸಾಮಾನ್ಯ ಕೋಚ್‌ಗಳ ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಆಹಾರವನ್ನು ನೀಡಲು ಮುಂದಾಗಿದೆ.

    ಇದನ್ನೂ ಓದಿ: ಚಲಿಸುತ್ತಿರುವ ಆಂಬುಲೆನ್ಸ್​​​ನಲ್ಲೇ ಮದ್ಯಪಾನ ಮಾಡಿದ ಪೊಲೀಸರು..?

    ಪ್ರಯಾಣಿಕರಿಗೆ ಹೊರೆಯಾಗದಂತೆ ಪ್ಲಾಟ್‌ಫಾರ್ಮ್‌ಗಳ ಬಳಿ ಇರುವ ವಿಸ್ತೃತ ಸೇವಾ ಕೌಂಟರ್‌ಗಳ ಮೂಲಕ ಸಾಮಾನ್ಯ ಕೋಚ್‌ಗಳಲ್ಲಿ ಇರುವವರಿಗೆ ಆಹಾರ ಸೇವೆಯನ್ನು ಒದಗಿಸಲು ಊಟ ಮತ್ತು ತಿಂಡಿಗಳು/ಕಾಂಬೋಗಳ ಮೆನುವನ್ನು ರೂಪಿಸಲಾಗಿದ್ದು, ಇದರ ಬೆಲೆ ಕ್ರಮವಾಗಿ 20 ರೂ. ಹಾಗೂ 50 ರೂ. ಇರಲಿದೆ. ಕೈಗೆಟಕುವ ದರದಲ್ಲಿ ನೀರಿನ ಸೇವೆಗಳನ್ನೂ ಒದಗಿಸಲಾಗುವುದು ಎಂದು ಭಾರತೀಯ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.

    ಈ ಕೌಂಟರ್​​ಗಳಿಗೆ IRCTಯ ಅಡುಗೆ ಘಟಕಗಳಿಂದ ಊಟವನ್ನು ಸರಬರಾಜು ಮಾಡಲಾಗುತ್ತದೆ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಿಸ್ತೃತ ಸೇವಾ ಕೌಂಟರ್‌ಗಳನ್ನು ಆರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

    ವಿಸ್ತೃತ ಸೇವಾ ಕೌಂಟರ್‌ಗಳೊಂದಿಗೆ ಹೊಸ ಮೆನು ಈಗಾಗಲೇ 51 ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇತರ ನಿಲ್ದಾಣಗಳನ್ನು ಸಹ ಗುರುತಿಸಿ ಕೌಂಟರ್​​ ತೆರೆಯಲು ಚಿಂತಿಸಲಾಗುತ್ತಿದೆ.ಈ ಸೇವೆಯನ್ನು ನಿರಂತರವಾಗಿ ಸುಧಾರಿಸಲು ಮತ್ತು ಪ್ರಯಾಣಿಕರ ಅಭಿವೃದ್ಧಿಯ ಆದ್ಯತೆಗಳನ್ನು ಪೂರೈಸಲು ರೈಲ್ವೆಯು ಪ್ರಯಾಣಿಕರಿಂದ ಪ್ರತಿಕ್ರಿಯೆಯನ್ನು ಪಡೆಯಲಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts