

ಮಂಜೇಶ್ವರ: ಬಂಟ ಸಮುದಾಯದವರಿಗೋಸ್ಕರ ಯುನೈಟೆಡ್ ಬಂಟ್ಸ್ ಕಾಸರಗೋಡು-ವರ್ಕಾಡಿ ಆಯೋಜಿಸುವ ದೀಪಾವಳಿ ಸಂದರ್ಭದಲ್ಲಿ ನಡೆಯಲಿರುವ ಎಂಟು ತಂಡಗಳ ಅಂಡರ್‌ಆರ್ಮ್ ಕ್ರಿಕೆಟ್ ಪ್ರೀಮಿಯರ್ ಲೀಗಿನ ಹರಾಜು ಪ್ರಕ್ರಿಯೆ ಸುಂಕದಕಟ್ಟೆಯಲ್ಲಿ ಇತ್ತೀಚೆಗೆ ನಡೆಯಿತು.
ಕಬಡ್ಡಿ ರಾಷ್ಟ್ರೀಯ ಕ್ರೀಡಾಳು ಹಾಗೂ ಸೀನಿಯರ್ ಕೋಚ್ ಸುಕೇಶ್ ಭಂಡಾರಿ ಉದ್ಘಾಟಿಸಿದರು. ಯುನೈಟೆಡ್ ಬಂಟ್ಸ್ ಸ್ಥಾಪಕ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ವರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯ ರಾಜಕುಮಾರ ಶೆಟ್ಟಿ ಮುಟ್ಲ, ಶೆಟ್ಟಿ ಬ್ರದರ್ ಕೂಳುರಿನ ಜಯರಾಜ್ ಶೆಟ್ಟಿ, ಆನೆಯಾಲ ಗುತ್ತು ಕಿಶೋರ್ ಶೆಟ್ಟಿ, ಯುನೈಟೆಡ್ ಬಂಟ್ಸ್ ಸಹ ಮಾಲೀಕ ಚಂದ್ರಹಾಸ ರೈ ಅಮೀನೆ ಶುಭ ಹಾರೈಸಿದರು. ಪ್ರೀಮಿಯರ್ ಲೀಗಿನ ಸಂಯೋಜಕ ರೋಹಿತ್ ರೈ ವರ್ಕಾಡಿ ವಂದಿಸಿದರು. ರಾಕೇಶ್ ಶೆಟ್ಟಿ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ವಿಖ್ಯಾತ್ ಆಳ್ವ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞೇಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಪ್ರದೀಶ್ ಶೆಟ್ಟಿ ಸಹಕರಿಸಿದರು.