ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ

fire
Published on

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಬಲ್ಯಾರ್ ಕಾಪು ರಸ್ತೆಯ ಹೊಸಗದ್ದೆ ಬಾಲಕೃಷ್ಣ ಶೆಟ್ಟಿ ಎಂಬುವರ ರಬ್ಬರ್ ಸ್ಮೋಕ್ ಹೌಸ್‌ಗೆ ಮಂಗಳವಾರ ಬೆಳಗಿನ ಜಾವ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಸುಮಾರು 8 ಕ್ವಿಂಟಾಲ್ ರಬ್ಬರ್ ಬೆಂಕಿಗೆ ಆಹುತಿಯಾಗಿದ್ದು ಸ್ಮೋಕ್ ಹೌಸ್‌ನ ಶೀಟುಗಳು ಸುಟ್ಟು ಹೋಗಿವೆ. ಸ್ಥಳೀಯರು ಮತ್ತು ಅಗ್ನಿಶಾಮಕದಳ ಬೆಂಕಿ ಹತೋಟಿಗೆ ತರಲು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net