ರೀಲ್ಸ್​ ಪ್ರಿಯರಿಗೆ ಸರ್ಕಾರದಿಂದ ಬಂಪರ್​ ಆಫರ್​; 'ಪರಿಸರ ಸಂರಕ್ಷಣೆ'ಯ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ| Bengaluru

Georgia (1)
Published on

ಬೆಂಗಳೂರು; ನಾಳೆಯಿಂದ ಆರಂಭಗೊಳ್ಳುತ್ತಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ನಿಮಿತ್ತ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತ ಕಂಟೆಂಟ್/ ವಿಡಿಯೋ ಕ್ರಿಯೇಟರ್ಸ್ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು, ಪರಿಸರ ಸಂರಕ್ಷಣೆಯ ಸಂದೇಶ ಸಾರಬಹುದಾಗಿದೆ.

ಮಾಲಿನ್ಯ ನಿಯಂತ್ರಣ ಹಾಗೂ ಪರಿಸರದ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಲು ಪರಿಸರದ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂಬ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿ ಅಧ್ಯಕ್ಷರಾಗಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ. ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ ಅ.10 ರಿಂದ ನ.19ರ ವರಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಳ್ಳಿ, ತಾಲೂಕು ಮತ್ತು ಪಟ್ಟಣ ಪ್ರದೇಶಗಳಲ್ಲಿಯೂ ಸಹ ಪರಿಸರದ ಬಗ್ಗೆ ಅರಿವು ಜಾಗೃತಿ ಮೂಡಿಸಲಾಗುವುದು ಎಂದು ನರೇಂದ್ರಸ್ವಾಮಿ ಹೇಳಿದ್ದಾರೆ.

ಇನ್ನೂ ಈ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಬಗ್ಗೆ ರೀಲ್ಸ್ ಮಾಡುವವರಿಗೆ 50 ಸಾವಿರ ರೂ. ಪ್ರಥಮ, 25 ಸಾವಿರ ರೂ.ದ್ವಿತೀಯ ಹಾಗೂ 10 ಸಾವಿರ ರೂಪಾಯಿ ತೃತೀಯ ಬಹುಮಾನ ಘೋಷಿಸಲಾಗಿದೆ. ಅ.10ಕ್ಕೆ ಬಳ್ಳಾರಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಆರಂಭವಾಗಿ, ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕ್ರಮಗಳನ್ನು ಜರುಗಲಿದೆ. ಎರಡರಿಂದ ಮೂರು ಜಿಲ್ಲೆಗಳಿಗೆ ಅನ್ವಯಿಸುವಂತೆ 15 ಬೃಹತ್‌ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವೆಂಬರ್ 18 ಮತ್ತು 19ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಕಾರ್ಯಕ್ರಮದೊಂದಿಗೆ ಇದು ಮುಕ್ತಾಯಗೊಳ್ಳಲಿದೆ.

ಪ್ರಮುಖ ಮಾರ್ಗಸೂಚಿಗಳು;

(ಏಜೆನ್ಸೀಸ್)

ಕೊಲಾಬರೇಷನ್; ಕಡ್ಡಾಯವಾಗಿ @pm.narendraswamy ಹಾಗೂ @kspcb_official ಇನ್​ಸ್ಟಾ ಖಾತೆಗೆ ಕೊಲಾಬರೇಶನ್ ಕಳುಹಿಸಬೇಕು

ಹ್ಯಾಶ್‌ಟ್ಯಾಗ್: ಕಡ್ಡಾಯವಾಗಿ ಅಧಿಕೃತ ಹ್ಯಾಶ್‌ಟ್ಯಾಗ್ #ParisaraRakshisi ಅನ್ನು ಕ್ಯಾಪ್ಟನ್‌ನಲ್ಲಿ ಬಳಸಿ

ಸಂಗೀತ: ಕಾಪಿರೈಟ್-ಮುಕ್ತ ಸಂಗೀತ ಅಥವಾ ನಿಮ್ಮ ಸ್ವಂತ ಧ್ವನಿಮುದ್ರಣವನ್ನು ಮಾತ್ರ ಬಳಸಿ

ಭಾಷೆ: ಕನ್ನಡ ಅಥವಾ ಇಂಗ್ಲಿಷ್ (ಅಥವಾ ಎರಡೂ ಬಳಸಬಹುದು)

ಫಾರ್ಮ್ಯಾಟ್: ವರ್ಟಿಕಲ್(9:16)

ಸಂದೇಶ: ಸರಳ, ಸ್ಪಷ್ಟ ಮತ್ತು ಪರಿಣಾಮಕಾರಿಯಾಗಿ ಪರಿಸರ ಸಂರಕ್ಷಣೆಯ ಸಂದೇಶ ನೀಡಬೇಕು

ಸ್ವಂತಿಕೆ: ರೀಲ್ಸ್ ಸಂಪೂರ್ಣವಾಗಿ ನಿಮ್ಮದೇ ಸೃಜನಾತ್ಮಕ ಕಲ್ಪನೆಯಾಗಿರಬೇಕು

ಅವಧಿ: ಗರಿಷ್ಠ 60 ಸೆಕೆಂಡುಗಳು

ಥೀಮ್: "ಪರಿಸರ ಸಂರಕ್ಷಣೆ" (ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ಮುಕ್ತ, ಹಸಿರೀಕರಣ, ಶುದ್ಧ ವಾಯು, ಮರುಬಳಕೆ ಇತ್ಯಾದಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net