ಗುಜರಾತ್: ಹಾಲು ಕೊಡುವ ಎಮ್ಮೆಗಳ ಬೆಲೆ ಹೆಚ್ಚು. ಆದರೆ ಗುಜರಾತಿನ ಕಚ್‌ನಲ್ಲಿ ಎಮ್ಮೆಯೊಂದು ಮಾರಾಟವಾಗಿದ್ದು, ಅದರ ಬೆಲೆಯು ಹೊಸ ದಾಖಲೆ ನಿರ್ಮಿಸಿದೆ.
ಕಚ್‌ನ ಲಖ್‌ಪತ್ ತಹಸಿಲ್‌ನ ವರ್ಮನಗರದ ಓಧನ್ ಎಂಬ ಹೆಸರಿನ ಎಮ್ಮೆಯ ಬೆಲೆ 1-2 ಲಕ್ಷ ರೂ. ಅಲ್ಲ ಬರೋಬ್ಬರಿ 7 ಲಕ್ಷ 11 ಸಾವಿರ ರೂ.ಗೆ ಮಾರಾಟವಾಗಿದೆ. ಮಂಗಳದನ್ ಗಧ್ವಿ ಎಂಬ ವ್ಯಕ್ತಿ ಈ ಎಮ್ಮೆಯ ಮಾಲೀಕನಾಗಿದ್ದ. ಗಾಂಧೀನಗರದ ಚಂದ್ರಾಳ ಗ್ರಾಮದ ಮಾಲ್ಧಾರಿ ದಾಖಲೆ ಬಿಡ್ ಮಾಡಿ ಓಡನ್ ಎಂಬ ಎಮ್ಮೆಯನ್ನು ಖರೀದಿಸಿದ್ದಾರೆ.
ಎಮ್ಮೆ ಮಾರುವ ಮುಂಚೆಯೇ ಮಂಗಲ್ದನ್ ಗಧ್ವಿಯ ಬಳಿ ಇನ್ನೊಂದು ಎಮ್ಮೆ ಇತ್ತು. ಇದರ ಬೆಲೆ 6 ಲಕ್ಷ ರೂ. ಇದನ್ನು ಅಹಮದಾಬಾದ್‌ನ ಪ್ರಭಾತ್ ಭಾಯ್ ಖರೀದಿಸಿದ್ದಾರೆ. ಅವರ ಹಿಂದಿನ ದಾಖಲೆಯನ್ನು ಮುರಿದು ಈ ಬಾರಿ ಮಂಗಲ್ದನ್ ಗಧ್ವಿ ತಮ್ಮ ಓಧನ್ ಎಂಬ ಎಮ್ಮೆಯನ್ನು 7 ಲಕ್ಷ 11 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಮಂಗಲ್ದನ್ ಗಧ್ವಿ ಸಾಕಿರುವ ಎಮ್ಮೆಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ.
ಎಮ್ಮೆಯ ಮಾಜಿ ಮಾಲೀಕ ಮಂಗಲದನ್ ಗಧ್ವಿ ಹೇಳುವ ಪ್ರಕಾರ, ಓಧನ್ ಎಂಬ ಹೆಸರಿನ ಈ ಎಮ್ಮೆ ಬನ್ನಿ ತಳಿಯ ಎಮ್ಮೆಯಾಗಿದೆ. ಈ ಎಮ್ಮೆಗೆ ನಾಲ್ಕೂವರೆ ವರ್ಷವಾಗಿದ್ದು, ಪ್ರತಿದಿನ 20 ಲೀಟರ್ ಹಾಲು ನೀಡುತ್ತದೆ. ಎಮ್ಮೆಗಾಗಿ ಇಷ್ಟು ಹೆಚ್ಚು ಬಿಡ್ ಮಾಡಿರುವುದು ಇದೇ ಮೊದಲು.
ಟೆಲಿಗ್ರಾಂ ಸಿಇಒ ಅರೆಸ್ಟ್! ಯಾಕೆ ಗೊತ್ತಾ?