

ನವದೆಹಲಿ: ತಾಯಿ ತನ್ನ ಮಗುವನ್ನು ರಕ್ಷಿಸಲು ಯಾವುದೇ ಹಂತಕ್ಕೆ ಹೋಗುತ್ತಾಳೆ. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಶತ್ರುವಿನೊಂದಿಗೆ ಹೋರಾಡುತ್ತಾಳೆ. ಅದು ಮನುಷ್ಯರಿರಲಿ ಅಥವಾ ಪ್ರಾಣಿಗಳಿರಲಿ, ತಾಯಿ ತನ್ನ ಮಗುವನ್ನು ರಕ್ಷಿಸುತ್ತಾಳೆ. ಆದರೆ ಇದೀಗ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಎಮ್ಮೆ ಕರುವೊಂದು ಆನೆಯನ್ನೇ ಹಿಮ್ಮೆಟ್ಟಿಸಿ ತನ್ನ ತಾಯಿಯನ್ನು ಕಾಪಾಡಿದೆ.
ಟ್ವಿಟ್ಟರ್ ಹ್ಯಾಂಡಲ್ @ ಅಮೇಜಿಂಗ್ ನೇಚರ್ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಆ ವೈರಲ್ ವೀಡಿಯೋದಲ್ಲಿ ಆನೆ ಮತ್ತು ಎಮ್ಮೆ ಮುಖಾಮುಖಿಯಾಗಿವೆ. ಅಷ್ಟರಲ್ಲಿ ಎಮ್ಮೆ ಕರು ಆನೆ ಮೇಲೆರಗಿ ಬಂದಿದೆ. ಎಮ್ಮೆ ಕರು ಅಟ್ಟಿಸಿಕೊಂಡು ಬರುತ್ತಿದ್ದಂತೆ ಆನೆ ಹಿಂದಕ್ಕೆ ಓಡಿದೆ. ಎಮ್ಮೆ ಕೂಡ ತನ್ನ ಕರುವನ್ನು ತಡೆಯಲು ಓಡಿದೆ. ಕೊನೆಗೆ ಆನೆ ಅಲ್ಲಿಂದ ತೆರಳಿದೆ. ಎಮ್ಮೆ ತನ್ನ ಕರುವಿನೊಂದಿಗೆ ಇನ್ನೊಂದು ದಿಕ್ಕಿನಲ್ಲಿ ಹೋಗಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು 6.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸುಮಾರು 6 ಸಾವಿರ ಮಂದಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
'ಆನೆ ಅನವಶ್ಯಕವಾಗಿ ದಾಳಿ ಮಾಡುವುದಿಲ್ಲ', 'ಆನೆ ಮರಿ ಆನೆಯನ್ನು ಇಷ್ಟಪಟ್ಟಿದೆ', 'ಆನೆಯ ವರ್ತನೆ ನನಗೆ ತುಂಬಾ ಇಷ್ಟವಾಯಿತು', 'ಎಮ್ಮೆ ಕರು ಧೈರ್ಯ ಮೆಚ್ಚಲೇಬೇಕು'ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.