ಗಜಿಯಾಬಾದ್: ಆಟೋದಲ್ಲಿ ಚಲಿಸುತ್ತಿದ್ದ ಬಿ.ಟೆಕ್ ವಿದ್ಯಾರ್ಥಿನಿಯನ್ನು ಹಿಂಬದಿಯಿಂದ ಬೈಕ್‌ನಲ್ಲಿ ಫಾಲೋ ಮಾಡಿದ ಕಳ್ಳರು ಆಕೆಯ ಮೊಬೈಲ್ ಕಸಿದುಕೊಂಡಿದ್ದರು. ಈ ವೇಳೆ ಆಟೋದಿಂದ ಹೆದ್ದಾರಿ ಮೇಲೆ ಬಿದ್ದ ವಿದ್ಯಾರ್ಥಿನಿಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉತ್ತರಪ್ರದೇಶದ ಗಜಿಯಾಬಾದ್ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಚಿಟಿಕೆ ಉಪ್ಪು ಹಾಕಿ ಕುಡಿದರೆ…ಈ ಅದ್ಭುತ ಪ್ರಯೋಜನಗಳು ನಿಮ್ಮದಾಗುತ್ತದೆ..!
ಘಟನೆಯ ವಿವರ: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಹೆದ್ದಾರಿಯಲ್ಲಿ ಬಿ.ಟೆಕ್ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ದೋಚಿರುವ ಘಟನೆ ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯನ್ನು ಸಾಕಷ್ಟು ದೂರದವರೆಗೆ ಬೆನ್ನಟ್ಟಿದ ದುಷ್ಕರ್ಮಿಗಳು ಆಕೆಯ ಫೋನ್ ಕದ್ದು ಸ್ಥಳದಿಂದ ಪರಾರಿಯಾಗಿದ್ದರು.
ಫೋನ್ ಕಸಿದುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದ ಕಳ್ಳರೊಂದಿಗೆ ಜಗಳವಾಡುತ್ತಿದ್ದ ಯುವತಿ ಆಯಾತಪ್ಪಿ ಆಟೋದಿಂದ ನೆಲಕ್ಕೆ ಬಿದ್ದಿದ್ದಾಳೆ. ಈ ವೇಳೆ ಮೊಬೈಲ್ ಕಸಿದ ದುಷ್ಕರ್ಮಿಗಳು ಸ್ಥಳದಲ್ಲಿ ನಿಲ್ಲದೆ ಪರಾರಿಯಾದರು. ಹೆದ್ದಾರಿಯಲ್ಲಿ ಬಿದ್ದ ಪರಿಣಾಮ ಆಕೆಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತು. ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (ಅಕ್ಟೋಬರ್ 29) ಕೊನೆಯುಸಿರೆಳೆದಿದ್ದಾಳೆ.
ಇದನ್ನೂ ಓದಿ: ಇನ್ನುಮುಂದೆ ಯಾವ ವಿಷಯವಾಗಿಯೂ ಮಾತನಾಡದಂತೆ ದಿಗ್ಬಂಧ: ನಟ ಜಗ್ಗೇಶ್ ಹೀಗಂದಿದ್ಯಾಕೆ?
ಶುಕ್ರವಾರ (ಅಕ್ಟೋಬರ್ 27) ವೆಬ್‌ಸಿಟಿ ಫ್ಲೈಓವರ್‌ನಲ್ಲಿ ನಡೆದ ಈ ಘಟನೆಯ ಬೆನ್ನಲ್ಲೇ ಬಲ್ಬೀರ್ ಮತ್ತು ಜಿತೇಂದ್ರ ಎಂದು ಗುರುತಿಸಲಾದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ये है दिल्ली–लखनऊ नेशनल हाइवे। गाजियाबाद में छात्रा ऑटो में जा रही थी। बाइकर्स लुटेरे ऑटो का पीछा करते हैं। छात्रा से मोबाइल लूटते हैं और उसको नीचे गिरा देते हैं। 48 घंटे बाद छात्रा की मौत हुई। एक लुटेरा जितेंद्र उर्फ जीतू मारा जा चुका है, दूसरा लुटेरा बलवीर घायल है। #Ghaziabad https://t.co/5ax5ykmkr1 pic.twitter.com/WAvcQuHPrU
— Sachin Gupta (@SachinGuptaUP) October 30, 2023
ಭಾನುವಾರ (ಅಕ್ಟೋಬರ್ 29) ಪೊಲೀಸರ ಗುಂಡಿನ ದಾಳಿಯಲ್ಲಿ ಗಾಯಗೊಂಡ ಬಲ್ಬೀರ್ನನ್ನು ಬಂಧಿಸಿದ್ದಾರೆ. ಆದರೆ, ಎರಡನೇ ಆರೋಪಿ ಜಿತೇಂದ್ರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಇಂದು ಜಿತೇಂದ್ರನನ್ನು ಸೋಮವಾರ (ಅಕ್ಟೋಬರ್ 30) ಪೊಲೀಸರು ಎನ್‌ಕೌಂಟರ್‌ನಲ್ಲಿ ಶೂಟೌಟ್ ಮಾಡಿದ್ದಾರೆ,(ಏಜೆನ್ಸೀಸ್).