VIDEO| ಮಹಿಳೆಗೆ ಕಿರುಕುಳ ನೀಡಿದ ಬಿಎಸ್​ಎಫ್​ ಯೋಧ; ಸೇವೆಯಿಂದ ಅಮಾನತು

BSF Jawan
Published on

ಮಣಿಪುರ: ಗಲಭೆ ಪೀಡಿತ ಮಣಿಪುರದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ಕಿರುಕುಳ ಎಸಗಿದ ಗಡಿ ಭದ್ರತಾ ಪಡೆ(BSF) ಯೋಧರರೊಬ್ಬರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಘಟನೆಯೂ ಮಣಿಪುರದ ಇಂಫಾಲ್​ನಲ್ಲಿ ನಡೆದಿದ್ದು, ಅಮಾನತಾದ ಯೋಧನನ್ನು ಸತೀಶ್​ ಎಂದು ತಿಳಿದು ಬಂದಿದೆ. ಮಹಿಳೆಗೆ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ BSF ಹಿರಿಯ ಅಧಿಕಾರಿಯೊಬ್ಬರು ಘಟನೆಯೂ ಜುಲೈ 20ರಂದು ಇಂಫಾಲ್​ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ನಡೆದಿದೆ. ಈ ಕುರಿತು ಮೊದಲಿಗೆ ಅರೆಸೇನಾ ಪಡೆಗೆ ದೂರು ಬಂದಿತ್ತು ಪರಿಶೀಲನೆ ನಡೆಸಿದ ನಂತರ ಆರೋಪಿಯನ್ನು ತಕ್ಷಣವೇ ಕೆಲಸದಿಂದ ಅಮಾನತು ಮಾಡಲಾಯಿತು.

ಈಗಾಗಲೇ ಯೋಧನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಯು ಸಹ ಆರಂಭವಾಗಿದೆ. ಇಂತಹ ಕೃತ್ಯಗಳು ನೋಡಿಕೊಂಡು ಸುಮ್ಮನೆ ಕೂರುವ ಮಾತಿಲ್ಲ ನ್ಯಾಯಯುತ ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ಕೊಡಿಸಲಾಗುವುದು ಎಂದು ಬಿಎಸ್​ಎಫ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net