More

    ಜನಮೆಚ್ಚುಗೆಯನ್ನು ಸಹಿಸಲಾಗದೆ ವಿಪಕ್ಷಗಳು ಫೇಕ್​ ಫ್ಯಾಕ್ಟರಿಯ ಮೊರೆ ಹೋಗುತ್ತಿವೆ: ಕಾಂಗ್ರೆಸ್​

    ಬೆಂಗಳೂರು: ಆಳಂದ ಶಾಸಕ ಬಿ.ಆರ್​.ಪಾಟೀಲ್​ ಹೆಸರಿರುವ ಲೆಟರ್​ಹೆಡ್​ನಲ್ಲಿ ಸಿಎಂಗೆ 30ಕ್ಕೂ ಹೆಚ್ಚು ಶಾಸಕರು ಪತ್ರ ಬರೆದಿರುವ ಕುರಿತು ಹೊಸ ಸುದ್ದಿಯೊಂದು ಹೊರ ಬಂದಿದ್ದು, ಇದು ಸುಳ್ಳು ಸುದ್ದಿಯೆಂದು ಸ್ಪಷ್ಟನೆ ನೀಡಲಾಗಿದೆ.

    ​ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ಕಾಂಗ್ರೆಸ್​ ಸೋಲಿನ ಹತಾಶೆಯಲ್ಲಿರುವ ವಿಪಕ್ಷಗಳು ಈಗ ತಮ್ಮ ಫೇಕ್ ಫ್ಯಾಕ್ಟರಿಗಳಿಗೆ ಹೆಚ್ಚಿನ ಕೆಲಸ ಕೊಟ್ಟಿವೆ ಎಂದು ಆರೋಪಿಸಿದೆ.

    ಗ್ಯಾರಂಟಿಗಳ ಜಾರಿ ಮಾಡಿದ ನಮ್ಮ ಸರ್ಕಾರಕ್ಕೆ ಸಿಗುತ್ತಿರುವ ಜನಮೆಚ್ಚುಗೆಯನ್ನು ಸಹಿಸಲಾಗದೆ ನಕಲಿ ಸೃಷ್ಟಿಯ ಮೊರೆ ಹೋಗಿವೆ ವಿಪಕ್ಷಗಳು. ಶಾಸಕ ಬಿ.ಆರ್​.ಪಾಟೀಲ್​ ಅವರ ಹಳೆಯ ವಿಳಾಸದ ನಕಲಿ ಲೆಟರ್ ಹೆಡ್ ನಲ್ಲಿ ನಕಲಿ ಪತ್ರ ಸೃಷ್ಟಿಸಿದ ಸಾಧನೆ ಮಾಡುತ್ತೇವೆ ಎಂದುಕೊಂಡಿದ್ದರೆ ಅದು ಮೂರ್ಖತನವಾಗುತ್ತದೆ ಎಂದು ಕಿಡಿಕಾರಿದೆ.

    ಇದನ್ನೂ ಓದಿ: ನಡೆಯುವ ವೇಳೆ ಭುಜ ತಾಕಿಸಿದ್ದಕ್ಕೆ ಹತ್ಯೆ

    ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಫೇಕ್ ಫ್ಯಾಕ್ಟರಿ ಹೊಸ ಹೊಸ ಟೂಲ್ ಕಿಟ್ ತಯಾರು ಮಾಡುತ್ತಿದೆ, ಅದರ ಬಾಗವಾಗಿ “ಉಡುಪಿಯ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ“ ಎಂದು ನಕಲಿ ಸುದ್ದಿಯ ಸ್ಕ್ರಿಪ್ಟ್ ತಯಾರಿಸಿದೆ.

    ಯಾವುದೇ ದೂರು ದಾಖಲಾಗದಿದ್ದರೂ ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಯಾವುದೇ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿರುವುದು ಪತ್ತೆಯಾಗಿಲ್ಲ. ಬಿಜೆಪಿಯ ಫೇಕ್ ಫ್ಯಾಕ್ಟರಿಯ ಸದಸ್ಯೆ ಸೃಷ್ಟಿಸಿದ ಸುಳ್ಳನ್ನೇ ಹಿಡಿದು ಜಗ್ಗಾಡುತ್ತಿರುವ ನಾಯಕರ ಹತಾಶೆಯು ಮಿತಿಮೀರಿ ಕಟ್ಟೆಯೊಡೆದಿರುವುದಕ್ಕೆ ಈ ವಿಷಯವೇ ಸಾಕ್ಷಿ ಎಂದು ತಿರುಗೇಟು ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts