More

    ಅನುಚಿತ ವರ್ತನೆ; ಭಾರತ ಮಹಿಳಾ ಕ್ರಿಕೆಟ್​ ತಂಡದ ನಾಯಕಿ ಹರ್ಮನ್​ಪ್ರೀತ್​​ ಕೌರ್​ಗೆ​ ಎರಡು ಪಂದ್ಯಗಳ ನಿಷೇಧ

    ಮುಂಬೈ: ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಭಾರತ ಮಹಿಳಾ ಕ್ರಿಕೆಟ್​ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​ಗೆ ಎರಡು ಅಂತರಾಷ್ಟ್ರೀಯ ಪಂದ್ಯದಿಂದ ನಿಷೇಧಿಸಲಾಗಿದೆ. ಪಂದ್ಯದ ಶೇ. 75ರಷ್ಟು ದಂಡವನ್ನು ಸಹ ವಿಧಿಸಲಾಗಿದೆ.

    ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಅಂತರಾಷ್ಟ್ರೀಯ ಕ್ರಿಕೆಟ್​​ ಸಮಿತಿ(ICC) ರೂಪಿಸಿರುವ ಎರಡು ಪ್ರತ್ಯೇಕ ನಿಯಮಗಳನ್ನು ಭಾರತ ಮಹಿಳಾ ಕ್ರಿಕೆಟ್​ ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಉಲ್ಲಂಘಿಸಿದ್ದರು.

    ಶನಿವಾರ ಭಾರತ-ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಅಂಪೈರ್​ ನಿರ್ಧಾರವನ್ನು ಧಿಕ್ಕರಿಸಿ ಅವರು ವಿಕೆಟ್​ಗೆ ಬ್ಯಾಟ್​ನಿಂದ ಹೊಡೆದಿದ್ದರು. ಪಂದ್ಯದ ಬಳಿಕ ಅಂಪೈರ್​ ತೀರ್ಪನ್ನು ಕರುಣಾಜನಕ ಎಂದು ಟೀಕಿಸಿ ಕೆಂಗಣ್ಣಿಗೆ ಗುರಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts