ಜಲಂಧರ್: ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪಂಜಾಬ್-ಜಮ್ಮು ಅಂತರರಾಜ್ಯ ಗಡಿಯುದ್ದಕ್ಕೂ ಹೆಚ್ಚಿನ ಸೈನಿಕರನ್ನು ನಿಯೋಜಿಸಿದೆ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಗಳನ್ನು ಅಳವಡಿಸಿದೆ ಎಂದು ಬಿಎಸ್ಎಫ್ನ ಪಂಜಾಬ್ ಗಡಿಯ ಮುಖ್ಯಸ್ಥ ಫುಲ್ಜೇಲ್ ತಿಳಿಸಿದರು.
ಇದನ್ನೂ ಓದಿ: ವಯನಾಡಿಗೆ ನಾಳೆ ಪ್ರಧಾನಿ ಮೋದಿ ಭೇಟಿ: ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯತೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇನ್‌ಸ್ಪೆಕ್ಟರ್ ಜನರಲ್ (ಐಜಿ) ಅತುಲ್ ಫುಲ್ಜೇಲ್ ಅವರು, ಜಮ್ಮುವಿಗೆ ಹೊಂದಿಕೊಂಡಿರುವ ಪಠಾಣ್‌ಕೋಟ್ ಜಿಲ್ಲೆಯ ಗುರುದಾಸ್‌ಪುರ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.ಸಿ.ಸಿ.ಟಿ.ವಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಎಚ್ಚರದಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಕೆಲವು ತಿಂಗಳುಗಳಲ್ಲಿ 20ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಹತ್ಯೆಗೆ ಕಾರಣವಾದ ಜಮ್ಮು ಪ್ರದೇಶದಲ್ಲಿ ಹೆಚ್ಚಿದ ಭಯೋತ್ಪಾದಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ಜಮ್ಮು ಮತ್ತು ಪಂಜಾಬ್-ಜಮ್ಮು ಗಡಿಯಲ್ಲಿ ನಿಯೋಜನೆಗಾಗಿ ಒಡಿಶಾದಿಂದ ಎರಡು ಬಿಎಸ್‌ಎಫ್ ಬೆಟಾಲಿಯನ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಆದೇಶಿಸಿತ್ತು.
ಮಾದಕವಸ್ತು ಕಳ್ಳಸಾಗಣೆಯ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಸ್ತೆ ಮಾರ್ಗವಾಗಿ ಕಳ್ಳಸಾಗಣೆ ಸಾಧ್ಯವಿಲ್ಲ. ಆದರೆ ಡ್ರೋನ್‌ಗಳ ಮೂಲಕ ಅಕ್ರಮ ನಡೆಯುತ್ತಿದೆ. ಡೊಡ್ಡ ಡ್ರೋನ್ ಮೂಲಕ ಕಳ್ಳಸಾಗಾಣೆಯ ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದ ನಿಂತಿದೆ. ಆದರೆ ಈಗ ಸಣ್ಣ ಡ್ರೋಣ್ ಮೂಲಕ ಅವ್ಯವಹಾರ ನಡೆಯುತ್ತಿದೆ. ಅವುಗಳ ಶಬ್ಧ ಕಡಿಮೆ ಇರುತ್ತದೆ. ಕಣ್ಣಿಗೂ ಕಾಣಿಸುವುದಿಲ್ಲ ಎಂದರು.
ಕಿಲೋಮೀಟರ್ಗಟ್ಟಲೆ ಎತ್ತರದಲ್ಲಿ ಅವು ಹಾರಾಡುವುದರಿಂದ ಹೊಡೆದುರುಳಿಸಿವುದು ಕಷ್ಟ. ಆದಾಗ್ಯೂ ಸಾಕಷ್ಟ ಡ್ರೋಣ್ಗಳನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆಗಸ್ಟ್ 10 ರಿಂದ ಪಂಜಾಬ್ ಗಡಿಯ 553 ಕಿ.ಮೀ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಎಸ್‌ಎಫ್ ಪಂಜಾಬ್ ಗಡಿಭಾಗದಲ್ಲಿ ಈ ವರ್ಷ 160 ಕೆಜಿಗೂ ಹೆಚ್ಚು ಹೆರಾಯಿನ್, 28 ಶಸ್ತ್ರಾಸ್ತ್ರಗಳು, 40 ಮ್ಯಾಗಜೀನ್‌ಗಳು ಮತ್ತು 374 ಬುಲೆಟ್ ರೌಂಡ್‌ಗಳನ್ನು ವಶಪಡಿಸಿಕೊಂಡಿದೆ. ಈ ಮುಂಭಾಗದಲ್ಲಿ ಒಟ್ಟು 24 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಅವರಲ್ಲಿ 12 ಮಂದಿಯನ್ನು ಪಾಕಿಸ್ತಾನ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ.