ವಯನಾಡಿಗೆ ನಾಳೆ ಪ್ರಧಾನಿ ಮೋದಿ ಭೇಟಿ: ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯತೆ!

modi

ನವದೆಹಲಿ: ಕೇರಳದ ಭೂ ಕುಸಿತ ಪೀಡಿತ ವಯನಾಡು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ, ನಾಳೆ (ಆಗಸ್ಟ್ 10) ಭೇಟಿ ನೀಡಲಿದ್ದಾರೆ. ಜಿಲ್ಲೆಯ ಎರಡು ಗ್ರಾಮಗಳಿಗೆ ಪ್ರಧಾನಿ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಇದನ್ನೂ ಓದಿ: 17 ತಿಂಗಳ ನಂತರ ಜೈಲಿನಿಂದ ಹೊರಬಂದ ಎಎಪಿ ನಾಯಕ ಮನೀಶ್ ಸಿಸೋಡಿಯಾ

ಮೋದಿ ಅವರು ನಾಳೆ ಬೆಳಿಗ್ಗೆ 11 ಗಂಟೆಗೆ ಕಣ್ಣೂರು ತಲುಪಲಿದ್ದಾರೆ, ಅಲ್ಲಿಂದ ಅವರು ವಯನಾಡು ಭೂ ಕುಸಿತ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಮಧ್ಯಾಹ್ನ 12.15ರ ಸುಮಾರಿಗೆ ವಯನಾಡ್ ಜಿಲ್ಲೆಯ ಚೂರಲ್ಮುಲಾ ಮತ್ತು ಮುಂಡಕ್ಕೈ ಗ್ರಾಮಕ್ಕೆ ಭೂ ಕುಸಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ಪುನರ್ವಸತಿ ಕಾರ್ಯಗಳ ಬಗ್ಗೆ ರಕ್ಷಣಾ ಪಡೆಗಳಿಂದ ಮಾಹಿತಿ ಪಡೆಯಲಿದ್ದಾರೆ. ನಂತರ ಪ್ರಧಾನಿ ಇದೊಂದು ’ರಾಷ್ಟ್ರೀಯ ವಿಪತ್ತು’ ಎಂದು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ನಿರಾಶ್ರಿತ ಕಾಳಜಿ ಕೇಂದ್ರ ಮತ್ತು ಗಾಯಗೊಂಡಿರುವ ಆಸ್ಪತ್ರೆಗೆ ಭೇಟಿ ನೀಡಲಿದ್ದು, ಸಂತ್ರಸ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಮೋದಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ರಣಭೀಕರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಇದುವರೆಗೆ ಮೃತ ಪಟ್ಟವರ ಸಂಖ್ಯೆ 418ಕ್ಕೆ ಏರಿದೆ. ಬಗೆದಷ್ಟು ಮೃತ ದೇಹಗಳು ಸಿಗುತ್ತಲೇ ಇರುವುದರಿಂದ ದುರಂತಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಧೈರ್ಯ ಇದ್ದರೆ ಗಂಡಸ್ತನದಿಂದ ರಾಜಕೀಯ ಮಾಡಬೇಕು: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…