ಹಾಡಹಗಲೇ ಕಾರಿನ ಗಾಜು ಒಡೆದು 10 ಲಕ್ಷ ರೂ. ದೋಚಿದ ಕಳ್ಳರು!

Car
Published on

ಬೆಳಗಾವಿ: ಹಾಡಹಗಲೇ ಕಾರೊಂದರ ಗಾಜನ್ನು ಒಡೆದ ದುಷ್ಕರ್ಮಿಗಳು, ಕಾರೊಳಗಿದ್ದ 10 ಲಕ್ಷ ರೂ. ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಬೆಳಗಾವಿಯಲ್ಲಿನ ಸಬ್​ ಜೈಲೊಂದರ ಮುಂದೆಯೇ ಇಂಥದ್ದೊಂದು ಪ್ರಕರಣ ನಡೆದಿದೆ.

ಬೆಳಗಾವಿಯ ಗೋಕಾಕ್​ನ ಸಬ್​ ಜೈಲ್ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜು ಒಡೆದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮುತ್ತುನಂದಿ ಎಂಬುವವರು ಹಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿ ಹಣವಿದ್ದ ಬ್ಯಾಗ್​ ಸೇರಿಸಿ ಮತ್ತೆ ಹಣ ವಿತ್​​ಡ್ರಾ ಮಾಡಲು ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ.

ಹಣ ಕಳೆದುಕೊಂಡ ಮುತ್ತುನಂದಿ ಕೂಡಲೇ ಗೋಕಾಕ್ ಶಹರ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net