ಹೀಗೊಂದು ಕಾನೂನಿದೆ: ಸ್ಮಾರಕದ ಇಟ್ಟಿಗೆ ಒಡೆದು ಹಾಕಿದ ಬ್ರಿಟೀಷ್​ ಭೂ ವಿಜ್ಞಾನಿಗೆ ಮರಣದಂಡನೆ ಶಿಕ್ಷೆ!

History
Published on

ಬಾಗ್ದಾದ್​: ತೀರಾ ಅಪರೂಪ ಪ್ರಕರಣಗಳಲ್ಲಿ, ಗಂಭೀರ ಸ್ವರೂಪದ ಅಪರಾಧಗಳಲ್ಲಿ ಮಾತ್ರ ಮರಣ ದಂಡನೆ ಶಿಕ್ಷೆಯಾಗುತ್ತದೆ. ಆದರೆ ಇಲ್ಲಿ ಕೇವಲ ಕಲ್ಲುಗಳನ್ನು ಒಡೆದು ಹಾಕಿದ ಭೂ ವಿಜ್ಞಾನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವ ಅಪರೂಪದ ಘಟನೆಯೊಂದು ನಡೆದಿದೆ.

ಇದು ಇಷ್ಟು ದೊಡ್ಡ ಅಪರಾಧವೇ ಎಂಬ ಪ್ರಶ್ನೆ ಮೂಡುವುದಂತೂ ಸತ್ಯ. ಹೌದು ಇರಾಕ್​ನಲ್ಲಿ ಇತಿಹಾಸಕ್ಕೆ ಸಂಬಂಧಪಟ್ಟ ಯಾವುದೇ ವಸ್ತುವನ್ನು ಒಡೆದು ಹಾಕಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಈ ಕಾನೂನಿನ ಅರಿವಿರದ ಬ್ರಿಟನ್​ನ ಭೂ ವಿಜ್ಞಾನಿಗೆ ಈಗ ಮರಣದಂಡನೆ ಶಿಕ್ಷೆಗೊಳಪಟ್ಟಿದ್ದಾರೆ.

ಜಿಮ್​ ಫಿಟ್ಟನ್​ (66) ಈತ ಇರಾಕ್​ಗೆ ಭೇಟಿ ನೀಡಿದಾಗ ಇಲ್ಲಿನ ಸ್ಮಾರಕ್ಕೆ ಭೇಟಿ ನೀಡಿ,12 ಕಲ್ಲುಗಳನ್ನು ಸಂಗ್ರಹಿಸಿದ್ದರು. ಇದೇ ವೇಳೆ ಅವು ಒಡೆದುಹೋಗಿವೆ. ಇದನ್ನು ನೋಡಿದ ಒಬ್ಬ ಪ್ರವಾಸಿಗ ದೂರು ದಾಖಲಿಸಿದ್ದನು. ಇದೀಗ ಈ ಪ್ರಕರಣದಲ್ಲಿ ಇವರಿಗೆ ಶಿಕ್ಷೆಯಾಗಿದೆ. ಆದರೆ ನನಗೆ ಇಂತಹ ಕಾನೂನು ಇರುವುದು ಗೊತ್ತಿಲ್ಲ ಎಂದು ಗೋಗರೆದರೂ ಪ್ರಯೋಜನವಾಗಿಲ್ಲ. ಇನ್ನು ಶಿಕ್ಷೆ ಜಾರಿಯಾಗುತ್ತಾ ಎಂಬುದನ್ನು ಕಾದುನೋಡಬೇಕು.

ಮಾರ್ಚ್​ ತಿಂಗಳಲ್ಲಿ ಈ ಘಟನೆ ನಡೆದಿದ್ದು, ಮೂರು ತಿಂಗಳ ವಿಚಾರಣೆ ಬಳಿಕ ಸೋಮವಾರ ಇರಾಕ್​ನ ನ್ಯಾಯಾಲಯ ಈ ತೀರ್ಪು ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net