More

    ಆನ್‌ಲೈನ್ ಜಾಹೀರಾತು ಮೂಲಕ ವಿಷವನ್ನು ಹೋಂ ಡೆಲಿವರಿ ಮಾಡಿದ ವ್ಯಕ್ತಿ 130 ಜನರ ಸಾವಿಗೆ ಕಾರಣನಾಗಿದ್ದ!

    ನವದೆಹಲಿ: ಬ್ರಿಟನ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಜನರ ಆಸೆಗಳನ್ನು ಪೂರೈಸುವ ವೆಬ್‌ಸೈಟ್ ಮತ್ತು ಅದರ ಸದಸ್ಯರೊಬ್ಬರ ಬಗ್ಗೆ ಇದೀಗ ಪೊಲೀಸರಿಗೆ ತಿಳಿದು ಬಂದಿದೆ. ಈ ಪ್ರಕರಣವು ಬ್ರಿಟನ್‌ನ ಕನಿಷ್ಠ 130 ಜನರ ಸಾವಿಗೆ ಸಂಬಂಧಿಸಿದ್ದು, ವೆಬ್‌ಸೈಟ್ ಮೂಲಕ ವಿಷವನ್ನು ಮಾರಾಟ ಮಾಡುತ್ತಿದ್ದ ಉಕ್ರೇನಿಯನ್ ವ್ಯಕ್ತಿಯನ್ನು ಸಹ ಗುರುತಿಸಲಾಗಿದೆ. 

    ವೆಬ್‌ಸೈಟ್ ಮತ್ತು ವಿಷವನ್ನು ಮಾರಾಟ ಮಾಡುವ ಕಂಪನಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ವಿಷದ ಪಾರ್ಸೆಲ್‌ಗಳನ್ನು ಆರ್ಡರ್‌ನಲ್ಲಿ ಕಳುಹಿಸಿರುವ ವ್ಯಕ್ತಿಯ ಹೆಸರು ಲಿಯೊನಿಡ್ ಝಕುಟೆಂಕೊ ಎಂದು ಹೇಳಲಾಗಿದೆ. ಮಾಹಿತಿಗಳ ಪ್ರಕಾರ, ಇವನು ವಾರಕ್ಕೆ 5 ಪಾರ್ಸೆಲ್‌ಗಳನ್ನು ಯುಕೆಗೆ ಕಳುಹಿಸಿದ್ದಾನೆ ಎಂಬ ಸುಳಿವು ಸಿಕ್ಕಿದೆ. 

    ಲಿಯೊನಿಡ್ ಮನೆ ಕೀವ್‌ನಲ್ಲಿದೆ. ಆದರೆ ಅವನು ಆನ್‌ಲೈನ್ ಆದೇಶಗಳ ಮೇಲೆ ಮಾರಣಾಂತಿಕ ವಿಷಕಾರಿ ರಾಸಾಯನಿಕವನ್ನು ಮಾರಾಟ ಮಾಡುವುದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾನೆ. ಆದರೆ ತನಿಖೆಯಲ್ಲಿ ಬಹಳ ವರ್ಷಗಳಿಂದ ರಾಸಾಯನಿಕವನ್ನು ಪೂರೈಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಆದರೆ ವಿಚಿತ್ರವೆಂದರೆ ಈ ರಾಸಾಯನಿಕವನ್ನು ಯುಕೆಯಲ್ಲಿ ಕಾನೂನುಬದ್ಧವಾಗಿ ಮಾರಾಟ ಮಾಡಬಹುದು.

    ಈ ರಾಸಾಯನಿಕಗಳನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸುವ ಕಂಪನಿಗಳಿಗೆ ಮಾತ್ರ ಮಾರಾಟ ಮಾಡಬಹುದು. ಈ ರಾಸಾಯನಿಕದ ಸಣ್ಣ ಪ್ರಮಾಣ ಸಹ ಮಾರಣಾಂತಿಕವಾಗಿದೆ. ಆದರೆ ಲಿಯೊನಿಡ್ ಆನ್‌ಲೈನ್ ಕಾರ್ಯಾಗಾರದಲ್ಲಿ ಅದನ್ನು ಹೇಗೆ ಖರೀದಿಸಬೇಕು ಮತ್ತು ಅದನ್ನು ಹೇಗೆ ಬಳಸಬೇಕು ಎಂದು ಹೇಳಿದ್ದನಂತೆ.

    2019 ರ ನಂತರ, ಬ್ರಿಟನ್‌ನಲ್ಲಿ ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದ ಸುಮಾರು 130 ಜನರ ತನಿಖೆ ಮಾಡಲಾಗಿದೆ ಎಂದು ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ವಿಜ್ಞಾನಿ ಪ್ರೊಫೆಸರ್ ಅಮೃತಾ ಅಹ್ಲುವಾಲಿಯಾ ಹೇಳುತ್ತಾರೆ. ಅವರ ರಕ್ತದ ಮಾದರಿಗಳನ್ನು ಪರೀಕ್ಷಿಸಿದಾಗ, ಮೇಲೆ ಹೇಳಿದ ರಾಸಾಯನಿಕದ ಮಾದರಿಯು ಕಂಡುಬಂದಿದೆ. ವರದಿಯ ಪ್ರಕಾರ, ವೆಬ್‌ಸೈಟ್ ಚೆಫ್ ಕೆನ್ನೆತ್ ಲಾ ಎಂಬ ವ್ಯಕ್ತಿಗೆ ಸೇರಿದ್ದು, ಇವನನ್ನು ಮೇ 2023 ರಲ್ಲಿ ಕೆನಡಾದಲ್ಲಿ ಬಂಧಿಸಲಾಯಿತು. 

    ಈತನ ವಿರುದ್ಧ ಕೊಲೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ 14 ಪ್ರಕರಣಗಳು ದಾಖಲಾಗಿವೆ. ಇವನು ಆ ರಾಸಾಯನಿಕವನ್ನುಪ್ರಪಂಚದಾದ್ಯಂತ 40 ದೇಶಗಳಲ್ಲಿ ಖರೀದಿದಾರರಿಗೆ 1200 ಕ್ಕೂ ಹೆಚ್ಚು ಬಾರಿ ಮಾರಾಟ ಮಾಡಿದ್ದಾನೆ.

    ಲಿಯೊನಿಡ್ ನವೆಂಬರ್ 2020 ರಿಂದ ಇವನ ಮೂಲಕ ರಾಸಾಯನಿಕಗಳನ್ನು ಮಾರಾಟ ಮಾಡುತ್ತಿದ್ದಾನೆ.

    2020ರ ಸೆಪ್ಟೆಂಬರ್‌ನಲ್ಲಿ ಆತ್ಮಹತ್ಯೆ ಪ್ರಕರಣವೊಂದನ್ನು ತನಿಖೆ ನಡೆಸುತ್ತಿದ್ದಾಗ ಬ್ರಿಟಿಷ್ ಅಧಿಕಾರಿಗಳಿಗೆ ವಿಷವನ್ನು ವೆಬ್‌ಸೈಟ್ ಮಾರಾಟ ಮಾಡುವ ಬಗ್ಗೆ ತಿಳಿದಿತ್ತು.

    ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು 2023 ರ ಡಿಸೆಂಬರ್‌ನಲ್ಲಿ ಲಿಯೊನಿಡ್​​ನಿಂದ ಅದೇ ರಾಸಾಯನಿಕವನ್ನು ಆನ್‌ಲೈನ್‌ನಲ್ಲಿ ಖರೀದಿಸಿದರು.
    ಸದ್ಯ ಬ್ರಿಟನ್‌ನಲ್ಲಿ ನಡೆಯುತ್ತಿರುವ ವಿಷ ಮಾರಾಟ ವ್ಯವಹಾರವನ್ನು ತಡೆಯಲು ಅಭಿಯಾನ ಪ್ರಾರಂಭಿಸಲಾಗಿದೆ.

    ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್​​​​​​ನಿಂದ ಶಾರುಖ್​​​​​​​​​​​​​ವರೆಗೆ… ಜಾಮ್‌ನಗರಕ್ಕೆ ಬಂದಿಳಿದ ಗಣ್ಯರು; ವಿಡಿಯೋಗಳಲ್ಲಿ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts