ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿದೆ ಸಮಾನತೆ ಮನೋಭಾವ: ತಲಪಾಡಿಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಶ್ಲಾಘನೆ

1 Min Read
ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿದೆ ಸಮಾನತೆ ಮನೋಭಾವ: ತಲಪಾಡಿಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಶ್ಲಾಘನೆ
ಸಂಸದ ಕ್ಯಾ.ಬ್ರಿಜೇಶ್ ಚೌಟ ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಅರೆಅಲೆಮಾರಿ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದೇವಸ್ಥಾನದ ಪ್ರದಾನ ಅರ್ಚಕ ಗಣೇಶ್ ಭಟ್, ಶ್ರೀನಿವಾಸ ನೆಲ್ಲಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.

ಉಳ್ಳಾಲ: ರಾಜ್ಯದ ಇತರ ಭಾಗದ ಧಾರ್ಮಿಕ ಕ್ಷೇತ್ರಗಳಲ್ಲಿ ಅಸ್ಪಶ್ಯತೆ ಕಾರಣದಿಂದ ಜಾತಿ ಹೆಸರಲ್ಲಿ ಹಿಂದುಗಳನ್ನು ಧಾರ್ಮಿಕ ಕ್ಷೇತ್ರಗಳಿಂದ ದೂರ ಇಡಲಾಗುತ್ತಿದೆ. ಆದರೆ ಕರಾವಳಿ ಭಾಗದಲ್ಲಿ ಎಲ್ಲ ಜಾತಿಯವರು ಧಾರ್ಮಿಕ ಕ್ಷೇತ್ರಗಳಲ್ಲಿ ಸೇರುವ ಮೂಲಕ ಹಿಂದುಗಳಲ್ಲಿ ಒಗ್ಗಟ್ಟು ಕಾಪಾಡಿಕೊಂಡು ಬರಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.

ಹಿಂದುತ್ವ ವಿರೋಧಿ ಕೃತ್ಯಗಳು ಹೆಚ್ಚಳ

ದ.ಕ.ದಲ್ಲಿ ಸಾಕಷ್ಟು ಸವಾಲುಗಳಿದ್ದು ಅಬ್ಬಕ್ಕ, ಸೋಮನಾಥೇಶ್ವರ ಊರಿನಲ್ಲಿ ಹಿಂದುತ್ವ ವಿರೋಧಿ ಕೃತ್ಯಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ದೇವಸ್ಥಾನಗಳು ಕೇವಲ ಪೂಜೆಗೆ ಸೀಮಿತವಾಗದೆ ಹಿಂದು ಸಮಾಜಕ್ಕೆ ಜಾಗೃತಿ ಮೂಡಿಸುವ, ಸಮಾಜಕ್ಕೆ ಶಕ್ತಿ ನೀಡುವ ಕೇಂದ್ರ ಆಗಬೇಕು. ದೇವಿಪುರದಲ್ಲಿ ಹಿಂದುಗಳು ಒಗ್ಗಟ್ಟು ಕಾಪಾಡಿಕೊಂಡು ಬಂದಿರುವುದರಿಂದ ಸಮಾಜ ಬಲಿಷ್ಠವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದೇವಸ್ಥಾನದ ಪ್ರದಾನ ಅರ್ಚಕ ಗಣೇಶ್ ಭಟ್, ಶ್ರೀನಿವಾಸ ನೆಲ್ಲಿತ್ತಾಯ, ತಲಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಬಿಜೆಪಿಯ ಮುಖಂಡರಾದ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ರಾಜೇಶ್ ಗುಡ್ಡೆಮನೆ, ನಂದನ್ ಮಲ್ಯ, ನಾರಾಯಣ ಕಜೆ, ನವೀನ್ ಆಳ್ವ, ಆಶಾ, ನಯನಾ, ವರುಣ್ ರಾಜ್, ಮೋಹನ್ ದಾಸ್ ಶೆಟ್ಟಿ ನೆತ್ತಿಲಬಾಳಿಕೆ ಉಪಸ್ಥಿತರಿದ್ದರು.

ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಹೆಚ್ಚಾಗಲು ಕಾರಣಗಳಿವೆ, ಆದರೆ ಬಿಜೆಪಿಯ ಮತಗಳು ಕಡಿಮೆಯಾಗಿಲ್ಲ. ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ನೂತನ ಸಂಸದರು ಧಾರ್ಮಿಕ ಕಾರ್ಯಕ್ರಮಗಳಿಗಿಂತಲೂ ಹೆಚ್ಚಾಗಿ ಅಭಿವೃದ್ಧಿ ಕಾರ್ಯ ನಡೆಸಬೇಕಿದ್ದು ಕಾರ್ಯಕರ್ತರ ಸಹಕಾರ ಅಗತ್ಯ.
| ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ

See also  1.34 ಲಕ್ಷ ರೂ. ಮೌಲ್ಯದ ಶ್ರೀಗಂಧದ ಗಿಡ ವಶ
Share This Article