ನನ್ನ ಬದುಕು ನರಕವಾಗಲಿದೆ... ಮದುವೆ ಮಂಟಪದಲ್ಲಿ AC ಇಲ್ಲದ್ದಕ್ಕೆ ವಿವಾಹ ರದ್ದುಗೊಳಿಸಿದ ವಧು! | Wedding

dk - 2025-06-11T112748.430
Published on

Wedding: ಮದುವೆ ಮಂಟಪದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ (ಎಸಿ) ಇಲ್ಲದಿದ್ದರಿಂದ ಮದುವೆಯನ್ನು ರದ್ದುಗೊಳಿಸಿದ ಘಟನೆಯೊಂದು ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.

ಹೌದು ಎಸಿ ಇಲ್ಲದ ಕಾರಣ ಸಣ್ಣ ಮಟ್ಟದಲ್ಲಿ ಜಗಳವಾದ ಆರಂಭವಾಗಿ ಕೊನೆಗೆ ವರನ ಕುಟುಂಬ ವಿರುದ್ಧ ವರದಕ್ಷಣೆ ಕೇಸ್​​ ದಾಖಲಿಸುವ ಮೂಲಕ ಮದುವೆ ಅಂತ್ಯಗೊಂಡಿದೆ ಎಂದು ದಿ ಪ್ರಿಂಟ್​​ ವರದಿ ಮಾಡಿದೆ.

ಘಟನೆ ಏನು..?

ವರದಿಗಳ ಪ್ರಕಾರ, ಶನಿವಾರ ರಾತ್ರಿ ಶಂಷಾಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ತೀವ್ರವಾದ ಶಾಖ ಮತ್ತು ಗಾಳಿಯ ಕೊರತೆಯಿಂದಾಗಿ ವಧು ಉಸಿರುಗಟ್ಟಿದಳು. ಹೀಗಾಗಿ ಎಸಿ ಕೇಳಿದ್ದಾರೆ. ಆದರೆ, ಕಲ್ಯಾಣ ಮಂಟಪದಲ್ಲಿ ಎಸಿ ಇಲ್ಲದ ಕಾರಣ ವರನ ಕಟುಂಬ ಸುಮ್ಮನಾಗಿದೆ. ಇದೇ ಒಂದು ಕಾರಣಕ್ಕೆ ಜಗಳ ಆರಂಭವಾಗಿದೆ. ಈ ಸಮಯದಲ್ಲಿ ವರನ ಕಡೆಯವರು ವಧು ಮತ್ತು ಅವಳ ಕುಟುಂಬದವರ ಮೇಲೆ ನಿಂದನೆ ಮಾಡಿದರು ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆ ಈ ಮದುವೆಯು ನನಗೆ ಗೌರವವನ್ನು ತರುವುದಿಲ್ಲ ಮತ್ತು ಅದು ಮುಂದುವರಿದರೆ ತನ್ನ ಜೀವನವು "ನರಕವಾಗುತ್ತದೆ" ಎಂದು ವಧು ಹೇಳುವ ಮೂಲಕ ಮಂಟಪದಿಂದ ಹೊರನಡೆದು ಮದುವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಹಂತಕ್ಕೆ ತಲುಪಿದೆ ಎಂದು ವರದಿ ಉಲ್ಲೇಖಿಸಿದೆ.

ಇನ್ನು ಈ ಗಲಾಟೆ ಹಿನ್ನೆಲೆ ಆಗ್ರಾ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ವಧುವಿನ ತಾಯಿ ಕೂಡ ವರನ ಕುಟುಂಬದಿಂದ ಹೆಚ್ಚಿನ ವರದಕ್ಷಿಣೆ ಬೇಡಿಕೆ ಇದೆ ಎಂದು ಆರೋಪಿಸಿ ಔಪಚಾರಿಕ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಹಂಸರಾಜ್ ಭಡೋರಿಯಾ ತಿಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net