

ಶಿವಮೊಗ್ಗ: ಮದ್ಯ ಸಾಮ್ರಾಜ್ಯದ ಲಾಕ್ ಓಪನ್ ಮಾಡಿ ಬಿಟ್ಟ ಕಾರಣ ಸೋಮವಾರ ರಾಜ್ಯದ ಹಲವೆಡೆ ಸೋಮವಾರ ಬೆಳ್ಳಂಬೆಳಗ್ಗೆಯೇ ಮದ್ಯದಂಗಡಿ ಮುಂದೆ ಕುಡುಕರು ಸರದಿ ನಿಲ್ಲಲಾರಂಭಿಸಿದ್ದರು. ಇದರಂತೆ ಶಿವಮೊಗ್ಗದ ಶರಾವತಿ ನಗರದಲ್ಲಿ ಮದ್ಯ ಪಡೆಯಲು ಜನರು ಸೋಮವಾರ ಬೆಳ್ಳಂಬೆಳಗ್ಗೆ ಮದ್ಯದಂಗಡಿ ಮುಂದೆ ಸರದಿಯಲ್ಲಿ ನಿಂತಿದ್ದರು.
ಶರಾವತಿ ನಗರದ ಎಂಎಸ್ ಐಎಲ್ ಎದುರು ಮದ್ಯ ಪ್ರೀಯರು ಮದ್ಯ ಪಡೆಯಲು ಕಾತುರದಿಂದ ಕಾದಿದ್ದರು. ಅಬಕಾರಿ ಇಲಾಖೆ ಮದ್ಯದಂಗಡಿ ತೆರೆಯಲು ಷರತ್ತುಬದ್ಧ ಅನುಮತಿ ನೀಡಿದ್ದು, ಬೆಳಗ್ಗೆ ೯ರಿಂದ ಸಂಜೆ ೭ರವರೆಗೆ ತೆರೆಯುವಂತೆ ಸೂಚಿಸಿದೆ. ಆದರೆ ಇಲ್ಲಿನ ಮದ್ಯದಂಗಡಿ ಎದುರು ಬೆಳಗ್ಗೆ ೭.೩೦ರಿಂದಲೇ ಸರದಿಯಲ್ಲಿ ಕಾದಿದ್ದರು. ಮದ್ಯ ಪ್ರೀಯರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
‘ಲಾಕ್ ಡೌನ್ ಹಿನ್ನಲೆಯಲ್ಲಿ ೪೨ ದಿನಗಳ ಬಳಿಕ ಮದ್ಯದಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಮದ್ಯದಂಗಡಿ ಮುಂದೆ ಸರದಿಯಲ್ಲಿ ಕಾಯುತ್ತಿದ್ದಾರೆ.