ಸ್ತನ ಕ್ಯಾನ್ಸರ್​ ಜಾಗೃತಿ ಮಾಸ: ಸ್ವ-ಪರೀಕ್ಷೆಯಿಂದ ಜೀವನ ಉಳಿಸಿಕೊಳ್ಳಲು ಈ ರೀತಿ ಮಾಡಿ! |Breast Cancer

breast-cancer
Published on

Breast Cancer: ಇಂದಿನ ದಿನಗಳಲ್ಲಿ ಜನರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್​ ಭಯವು ರೋಗಿಗಳಿಂದ ಸಮಥಿಸಲ್ಪಟ್ಟಿದೆ. ಹೆಚ್ಚಾಗಿ ಮಹಿಳೆಯರು ಸ್ತನ ಕ್ಯಾನ್ಸರ್​ ಎಂಬ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಅಧ್ಯಯನದ ಪ್ರಕಾರ ಭಾರತದಲ್ಲಿ ಈ ವರ್ಷ ಸ್ತನ ಕ್ಯಾನ್ಸರ್​ ಸಂಖ್ಯೆ 2,32,832 ಕ್ಕೆ ಗಣನೀಯವಾಗಿ ಏರಿಕೆಯಾಗಿರುವುದನ್ನು ಕಾಣಬಹುದಾಗಿದೆ.

ಪ್ರತಿ ವರ್ಷ ಸ್ತನ ಕ್ಯಾನ್ಸರ್​ ಜಾಗೃತಿ ಮಾಸವನ್ನು ಆಚರಿಸಲಾಗುತ್ತದೆ. ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶಾದ್ಯಂತ ಅನೇಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಹಾಗಾಗಿ ಸ್ತನ ಕ್ಯಾನ್ಸರ್​, ಅದರ ಕಾರಣಗಳು, ಪರಿಣಾಮ ನಿಭಾಯಿಸುವ ಸಲುವಾಗಿ ಕೆಲವೊಂದು ಆಯುರ್ವೇದ ಔಷಧಗಳ ಬಗ್ಗೆ ಮಾಹಿತಿ ತಿಳಿಯಿರಿ...

ಸ್ತನ ಕ್ಯಾನ್ಸರ್ ಬಗ್ಗೆ

ನೀವು ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದರೆ, ಇದರರ್ಥ ಸ್ತನ ಕೋಶಗಳು ಕ್ಯಾನ್ಸರ್ ಕೋಶಗಳಾಗಿ ರೂಪಾಂತರಗೊಂಡು ಗಡ್ಡೆಗಳನ್ನು ಬೆಳೆಸಿಕೊಳ್ಳುತ್ತವೆ. ಇದು ದೇಹದ ಇತರ ಭಾಗಗಳಿಗೆ ಕ್ಯಾನ್ಸರ್​ ಆಕ್ರಮಣಕಾರಿಯಾಗಿ ಪರಿಣಾಮ ಬೀರಬಹುದು. ಈ ರೋಗವು 50 ವರ್ಷ ಮೇಲ್ಪಟ್ಟ ಮಹಿಳೆರಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಇತ್ತೀಚೆಗೆ ಯುವತಿಯರಲ್ಲಿಯೂ ಪ್ರಕರಣಗಳು ಹೆಚ್ಚುತ್ತಿವೆ ಎಂದು ವರದಿಯಾಗಿದೆ.

ಆನುವಂಶಿಕತೆ, ವಯಸ್ಸು, ಹಾರ್ಮೋನುಗಳ ಸಮಸ್ಯೆಗಳು ಮತ್ತು ಮದ್ಯಪಾನ, ಧೂಮಪಾನ, ಬೊಜ್ಜು ಮತ್ತು ನಿಷ್ಕ್ರಿಯತೆಯಂತಹ ಜೀವನಶೈಲಿಯ ಆಯ್ಕೆಗಳು ಸೇರಿದಂತೆ ಸ್ತನ ಕ್ಯಾನ್ಸರ್​ಗಳು ದೇಹದ ಮೇಲೆ ಪರಿಣಾಮ ಬೀರುತ್ತವೆ. ಇನ್ನು ಸ್ತನದ ಗಾತ್ರದಲ್ಲಿ ಬದಲಾವಣೆ, ಚರ್ಮದ ಕೆಂಪು, ಸ್ರಾವ ಮತ್ತು ಬದಲಾವಣೆಗಳಂತಹ ಮೊಲೆತೊಟ್ಟುಗಳ ಸಮಸ್ಯೆಗಳು ಸ್ತನ ಕ್ಯಾನ್ಸರ್​ನ ಲಕ್ಷಣಗಳಾಗಿವೆ.

ಸ್ತನ ಕ್ಯಾನ್ಸರ್ ನಿರ್ವಹಣೆಗೆ 4 ಆಯುರ್ವೇದ ಸಲಹೆ

ಗಿಡಮೂಲಿಕೆಗಳು

ಕೆಲವು ಆಯುರ್ವೇದ ಆಹಾರಗಳಾದ ಆಮ್ಲಾ, ಅಶ್ವಗಂಧ, ಅರಿಶಿಣ, ತುಳಸಿ ಮತ್ತು ಗಿಲೋಯ್​ನಂತಹ ಆಹಾರಗಳನ್ನು ಸೇವಿಸುವುದರಿಂದ ಸ್ತನ ಕ್ಯಾನ್ಸರ್‌ ಚಿಕಿತ್ಸೆಗೆ ಸಹಾಯಕವಾಗಬಹುದು. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ.

ಆಹಾರ

ಆಯುರ್ವೇದವು ನಿಮ್ಮ ದೋಷಕ್ಕೆ ಅನುಗುಣವಾಗಿ ತಿನ್ನಲು ಮತ್ತು ಚಿಕಿತ್ಸೆಯನ್ನು ಹೆಚ್ಚಿಸಲು ಸೂಚಿಸುತ್ತದೆ. ತಾಜಾ ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಹಾಲಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ. ಹಾಗೆಯೇ ನೀರು ಮತ್ತು ಗಿಡಮೂಲಿಕೆ ಪಾನೀಯಗಳೊಂದಿಗೆ ದೇಹವನ್ನು ಹೈಡ್ರೇಟ್​ ಮಾಡಿ. ಇದು ಸ್ತನ ಕ್ಯಾನ್ಸರ್​ನ್ನು ತಡೆಯಲು ಸಹಾಯ ಮಾಡುತ್ತದೆ.

ಜೀವನಶೈಲಿ

ದೇಹದ ಸಮಗ್ರ ಆರೈಕೆಗಾಗಿ ವ್ಯಾಯಾಮ, ಯೋಗ ಮತ್ತು ಧ್ಯಾನವನ್ನು ಮಾಡಿ. ಇದು ಕ್ಯಾನ್ಸರ್ ಅಪಾಯವಾಗಿರುವ ಬೊಜ್ಜುತನವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗೆಯೇ ಧೂಮಪಾನ, ಮದ್ಯಪಾನವನ್ನು ಸೇವಿಸುವುದನ್ನು ಬಿಡಿ ಇವುಗಳ ಅಭ್ಯಾಸವು ಕ್ಯಾನ್ಸರ್​ ಬರಲು ಕಾರಣವಾಗುತ್ತದೆ.

ವೈದ್ಯಕೀಯ

ಯಾರಿಗಾದರು ಸ್ತನ ಕ್ಯಾನ್ಸರ್​ ಲಕ್ಷಣಗಳು ಕಂಡು ಬಂದರೆ ಅವರು ನಿಯಮಿತ ತಪಾಸಣೆಗಾಗಿ ವೈದ್ಯರ ಬಳಿ ಹೋಗುವುದು ಉತ್ತಮ. ಮೊದಲು ಮುನ್ನಚ್ಚರಿಕೆಗಾಗಿ ನಿಮ್ಮ ಕುಟುಂಬದಲ್ಲಿ ಯಾರಾದರು ಈ ಸಮಸ್ಯೆಯಿಂದ ಬಳಲುತ್ತಿದ್ದಾರಾ ಎಂದು ತಿಳಿಯಿರಿ. ಇದಾದ ಬಳಿಕ ವೈದ್ಯರನ್ನು ಭೇಟಿ ಮಾಡಿ ಸುರಕ್ಷಿತವಾಗಿರಲು ಚಿಕಿತ್ಸೆ ಪಡೆಯಿರಿ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net