ಬ್ರೆಜಿಲ್​ ಅಧ್ಯಕ್ಷರಿಗೆ ಕೊವಿಡ್​-19 ಸೋಂಕು; ಒಂದೂ ಮುನ್ನೆಚ್ಚರಿಕಾ ಕ್ರಮ ಪಾಲಿಸುತ್ತಿರಲಿಲ್ಲ ಜೇರ್​ ಬೊಲ್ಸೊನಾರೊ

Jair
Published on

ಬ್ರೆಸಿಲಿಯಾ: ಕೊವಿಡ್​​-19 ಸೋಂಕು ಅತಿಯಾಗಿ ಬಾಧಿಸಿದ ದೇಶಗಳಲ್ಲಿ ಒಂದಾದ ಬ್ರಜಿಲ್​ ಅಧ್ಯಕ್ಷ ಜೇರ್​ ಬೊಲ್ಸೊನಾರೊ ಅವರಿಗೂ ಕರೊನಾ ಸೋಂಕು ತಗುಲಿದೆ.

ಮಾಧ್ಯಮಗಳಿಗೆ ನೀಡಿದ ಸಂದರ್ಶನಲ್ಲಿ ಜೇರ್​ ಅವರೇ ತಮಗೆ ವೈರಸ್​ ತಗುಲಿದ್ದನ್ನು ತಿಳಿಸಿದ್ದಾರೆ. ಮಾಸ್ಕ್​ ಧರಿಸಿ, ಪತ್ರಿಕಾ ವರದಿಗಾರರಿಂದ ದೂರವೇ ನಿಂತು ಮಾತನಾಡಿದ ಜೇರ್​ ಅವರು, ನಾನು ಸದ್ಯ ಆರೋಗ್ಯವಾಗಿಯೇ ಇದ್ದೇನೆ. ಸಹಜವಾಗಿಯೇ ಓಡಾಡಬಲ್ಲೆ. ಆದರೆ ವೈದ್ಯಕೀಯ ಸಲಹೆಯನ್ನು ಪಾಲಿಸಬೇಕಾಗಿದೆ ಎಂದು ಹೇಳಿದ್ದಾರೆ.

ಜೇರ್​ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಸೋಮವಾರ ಅವರು ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದರು. ಇಂದು ವರದಿ ಬಂದಿದ್ದು ಸೋಂಕು ದೃಢಪಟ್ಟಿದೆ.  ಜೇರ್​ ಅವರಿಗೆ ಶ್ವಾಸಕೋಶದ ಸ್ಕ್ಯಾನ್​ ಕೂಡ ಮಾಡಲಾಗಿದೆ. ಈ ವೇಳೆ ಶ್ವಾಸಕೋಶದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಗೊತ್ತಾಗಿದೆ ಎಂದು ಬ್ರೆಜಿಲ್​ ಮಾಧ್ಯಮಗಳು ವರದಿಯ ಮಾಡಿವೆ. ಇದನ್ನೂ ಓದಿ: ಚೀನಾ ಸೇನೆ ಹಿಂದೆ ಸರಿದರೂ ಕಾಂಗ್ರೆಸ್​ಗಿಲ್ಲ ಸಮಾಧಾನ; 2013ರಲ್ಲಿ ಮೋದಿಯವರು ಮಾಡಿದ್ದ ಟ್ವೀಟ್​ಗೆ ಈಗ ಉತ್ತರ ಬೇಕಂತೆ…

ಬ್ರೆಜಿಲ್​ ಅಧ್ಯಕ್ಷ ಜೇರ್​ ಅವರು ಈ ಹಿಂದೆ ಕೊವಿಡ್​-19 ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮಾಸ್ಕ್​ ಧರಿಸದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಯಾರಿಗೆಂದರೆ ಅವರಿಗೆ ಶೇಕ್​ ಹ್ಯಾಂಡ್​ ಮಾಡುತ್ತಿದ್ದರು. ಅವರಿಗೆ ಇದೇ ಕಾರಣಕ್ಕೆ ಸೋಂಕು ತಗುಲಿರಬಹುದು ಎಂದೂ ಹೇಳಲಾಗಿದೆ. ಈ ಮಧ್ಯೆ ಅಧ್ಯಕ್ಷರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲೂ ಸೋಂಕಿನ ಭೀತಿ ಆವರಿಸಿದೆ.ಇದನ್ನೂ ಓದಿ: ಕೇರಳ ‘ಚಿನ್ನ’ದ ಹಗರಣದ ತನಿಖೆಯಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡಲಿ…: ಕಾಂಗ್ರೆಸ್ ಮುಖಂಡನ ಒತ್ತಾಯ

ಬ್ರೆಜಿಲ್​​ನಲ್ಲಿ ಸುಮಾರು 15 ಲಕ್ಷ ಜನರಿಗೆ ಸೋಂಕು ತಗುಲಿದ್ದು, 65 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net