ಚೀನಾ ಅಸ್ತ್ರಕ್ಕೆ ಪ್ರಬಲ ಪ್ರತ್ಯಸ್ತ್ರ; ಬ್ರಹ್ಮೋಸ್​, ನಿರ್ಭಯ್​ ಕ್ಷಿಪಣಿಗಳ ಬಲ

China 28 sept
Published on

ನವದೆಹಲಿ: ಪೂರ್ವ ಲಡಾಖ್​ನ ಗಡಿ ತಕರಾರಿನ ಹಿನ್ನೆಲೆಯಲ್ಲಿ ಚೀನಾದಿಂದ ಎದುರಾಗಬಹುದಾದ ಯಾವುದೇ ಸವಾಲು ಎದುರಿಸಲು ಭಾರತೀಯ ಸಶಸ್ತ್ರ ಪಡೆಗಳ ಬತ್ತಳಿಕೆ ಪ್ರಬಲ ಅಸ್ತ್ರಗಳಿಂದ ಸಜ್ಜಿತವಾಗಿವೆ. 500 ಕಿ.ಮೀ. ವ್ಯಾಪ್ತಿಯ ಬ್ರಹ್ಮೋಸ್ ಕ್ರೂಯಿಸ್ ಕ್ಷಿಪಣಿ, 800 ಕಿ.ಮೀ. ಸಾಮರ್ಥ್ಯದ ನಿರ್ಭಯ್ ಕ್ರೂಯಿಸ್ ಕ್ಷಿಪಣಿ, ಭೂಮಿಯಿಂದ ಆಗಸಕ್ಕೆ ನೆಗೆಯುವ (ಎಸ್​ಎಎಂ-ಸ್ಯಾಮ್ ಆಕಾಶ್ ಕ್ಷಿಪಣಿಗಳು ಚೀನಾದ ಕ್ಷಿಪಣಿಗಳನ್ನು ಎದುರಿಸುವ ಶಕ್ತಿ ಹೊಂದಿರುವ ಭಾರತದ ಪ್ರಮುಖ ಕ್ಷಿಪಣಿಗಳಾಗಿವೆ. ಆಕಾಶ್ ಕ್ಷಿಪಣಿ 40 ಕಿಮೀ ದೂರದಿಂದಲೇ ಆಗಸದಲ್ಲಿ ಶತ್ರುಗಳ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಭಾರತ-ಡೆನ್ಮಾರ್ಕ್​ ವರ್ಚ್ಯುವಲ್​ ಸಭೆ; ಚೀನಾಕ್ಕೆ ಮಾತಿನ ಮೂಲಕವೇ ತಿವಿದ ಪ್ರಧಾನಿ ಮೋದಿ;

ಚೀನಾದ ಅಸ್ತ್ರಗಳು: ಬಿಕ್ಕಟ್ಟು ಆರಂಭ ವಾದ ನಂತರ, ಚೀನಾದ ಪಿಎಲ್​ಎಯ ದಕ್ಷಿಣ ಕಮಾಂಡ್, ಟಿಬೆಟ್ ಮತ್ತು ಕ್ಸಿನ್ಸಿಯಾಂಗ್​ನಲ್ಲಿ 2000 ಕಿಲೋ ಮೀಟರ್ ದೂರದವರೆಗೆ ದಾಳಿ ಮಾಡಬಲ್ಲ ಶಸ್ತ್ರಗಳು ಮತ್ತು ದೂರ ವ್ಯಾಪ್ತಿಯ ಸ್ಯಾಮ್ಳನ್ನು ನಿಯೋಜಿ ಸಿದೆ. ಚೀನಾ ಆಕ್ರಮಿತ ಅಕ್ಸಾಯ್ಚಿನ್ ಪ್ರದೇಶ ಮಾತ್ರವಲ್ಲದೆ 3,488 ಕಿ.ಮೀ. ಉದ್ದದ ವಾಸ್ತವ ಗಡಿ ರೇಖೆಗುಂಟ (ಎಲ್​ಎಸಿ) ಇರುವ ಕಶ್​ಗರ್, ಹೋಟಾನ್, ಲ್ಹಾಸಾ ಮತ್ತು ನ್ಯಿಂಗ್ಚಿ ಪ್ರದೇಶಗಳಲ್ಲಿ ಕೂಡ ಪಿಎಲ್​ಎ ಕ್ಷಿಪಣಿಗಳನ್ನು ನೆಲೆಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net