ಲಕ್ನೋ: ಭಾರತ ಮತ್ತು ಪಾಕಿಸ್ತಾನ ನಡುವಿನ ದಿನಗಳ ಮಿಲಿಟರಿ ಸಂಘರ್ಷ ಮತ್ತು ಕದನ ವಿರಾಮ ಘೋಷಣೆಯ ಬಳಿಕ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು (11) ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ. ಇದು ಭಾರತದ ಮಿಲಿಟರಿ ಶಸ್ತ್ರಾಗಾರಕ್ಕೆ ಪ್ರಮುಖ ಉತ್ತೇಜನ ನೀಡಲಿದೆ.
ವಾರ್ಷಿಕವಾಗಿ 80 ರಿಂದ 100 ಕ್ಷಿಪಣಿಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿರುವ ಈ ಘಟಕವನ್ನು 2018 ರಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ ಕಲ್ಪಿಸಲಾಗಿತ್ತು. ಈ ಸ್ಥಾವರಕ್ಕೆ 2021 ರಲ್ಲಿ ಅಡಿಪಾಯ ಹಾಕಲಾಗಿತ್ತು.

At around 11.00 AM today, 11th May, Raksha Mantri Shri @rajnathsingh will
virtually inaugurate the BrahMos Aerospace Integration and Testing Facility in Lucknow.— रक्षा मंत्री कार्यालय/ RMO India (@DefenceMinIndia) May 11, 2025
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPO ಮಶಿನೋಸ್ಟ್ರೋಯೇನಿಯಾ ನಡುವಿನ ಜಂಟಿ ಸಹಯೋಗದ ಮೂಲಕ ನಿರ್ಮಿಸಲಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳು ಭಾರತದ ರಕ್ಷಣಾ ಸಾಮರ್ಥ್ಯದ ಪ್ರಮುಖ ಆಧಾರಸ್ತಂಭವಾಗಿ ಉಳಿದಿವೆ.
ರಕ್ಷಣಾ ಉತ್ಪಾದನೆಗೆ ಉತ್ತರ ಪ್ರದೇಶ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವುದರಿಂದ, ಕ್ಷಿಪಣಿ ಉತ್ಪಾದನೆಯಲ್ಲಿ ರಾಜ್ಯವು ಪ್ರಮುಖ ಪಾತ್ರ ವಹಿಸಲಿದೆ.
300 ಕೋಟಿ ರೂ. ಉದ್ಯಮ
ಲಕ್ನೋದಲ್ಲಿ ನಿರ್ಮಿಸಲಾದ ಈ ಬ್ರಹ್ಮೋಸ್ ಘಟಕವನ್ನು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರೊಂದಿಗೆ ಅತ್ಯಾಧುನಿಕ ಪರೀಕ್ಷಾ ಸೌಲಭ್ಯವನ್ನೂ ಉದ್ಘಾಟಿಸಲಾಗುವುದು. ಇದು ಭಾರತದ ರಕ್ಷಣಾ ಪಡೆಯ ಕಾರ್ಯತಂತ್ರದ ಸಾಮರ್ಥ್ಯಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಘಟಕವು ಭಾರತದ ರಕ್ಷಣಾ ಉತ್ಪಾದನೆಯ ಸ್ವಾವಲಂಬನೆಯಲ್ಲಿ ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ. ವಿಶೇಷವಾಗಿ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಬ್ರಹ್ಮೋಸ್ ಘಟಕ ಶತ್ರು ಪಾಳಯದಲ್ಲಿ ನಡುಕ ಹುಟ್ಟಿಸಲಿದೆ.
ಇದನ್ನೂ ಓದಿ:ಗಡಿಗಳಲ್ಲಿ ಉದ್ವಿಗ್ನತೆಯ ನಡುವೆ ಮೊಬೈಲ್ ಫೋನ್ ಬೆಳಕಿನಲ್ಲಿ ಮದುವೆ ಸಮಾರಂಭ! wedding
ಒಟ್ಟು ಹಂಚಿಕೆಯಲ್ಲಿ ಸುಮಾರು 80 ಎಕರೆಗಳನ್ನು ಬ್ರಹ್ಮೋಸ್ ಸೌಲಭ್ಯಕ್ಕಾಗಿ ಮೀಸಲಿಡಲಾಗಿದ್ದು, ಒಟ್ಟು 117 ಹೆಕ್ಟೇರ್ ಭೂಮಿಯನ್ನು ಲಕ್ನೋ ನೋಡ್‌ನಲ್ಲಿರುವ 12 ಕಂಪನಿಗಳಿಗೆ ನೀಡಲಾಗಿದೆ, ಇದರಲ್ಲಿ ಏರೋಲಾಯ್ ಟೆಕ್ನಾಲಜೀಸ್ ಕೂಡ ಸೇರಿದೆ. ಇದರ ಉತ್ಪನ್ನಗಳನ್ನು ಚಂದ್ರಯಾನದಂತಹ ಕಾರ್ಯಾಚರಣೆಗಳಲ್ಲಿ ಮತ್ತು ಸುಧಾರಿತ ಯುದ್ಧ ವಿಮಾನಗಳಲ್ಲಿ ಬಳಸಲಾಗಿದೆ ಎಂದು ವರದಿಯಾಗಿದೆ.
ಈ ಕ್ಷಿಪಣಿ ಘಟಕದಲ್ಲಿ ಭಾನುವಾರದಿಂದ ‘ಬ್ರಹ್ಮೋಸ್’ ಕ್ಷಿಪಣಿ ಉತ್ಪಾದನೆ ಆರಂಭವಾಗಲಿದೆ. ಈ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯು 290-400 ಕಿ.ಮೀ. ವರೆಗೆ ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದರ ವೇಗ Mach 2.8, ಅಂದರೆ ಇದು ಧ್ವನಿಯ ವೇಗಕ್ಕಿಂತ ಮೂರು ಪಟ್ಟು ವೇಗವಾಗಿರುತ್ತದೆ. ಇದನ್ನು ನೆಲ, ಗಾಳಿ ಮತ್ತು ಸಮುದ್ರದಿಂದ ಹಾರಿಸಬಹುದು. ‘ಫೈರ್ ಅಂಡ್ ಫರ್ಗೆಟ್’ ತಂತ್ರಜ್ಞಾನದಿಂದ ಸಜ್ಜುಗೊಂಡಿರುವ ಈ ಕ್ಷಿಪಣಿಯನ್ನು ಶತ್ರುಗಳ ರಾಡಾರ್‌ಗಳು ಪತ್ತೆಹಚ್ಚಲು ಸಾಧ್ಯವಿಲ್ಲ.
ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪೂರ್ಣ ಪ್ರಮಾಣದ ಯುದ್ಧದ ಅಪಾಯವನ್ನು ಹೆಚ್ಚಿಸಿದ ನಾಲ್ಕು ದಿನಗಳ ಗಡಿಯಾಚೆಗಿನ ಡ್ರೋನ್ ಹಾಗೂ ಕ್ಷಿಪಣಿ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನಗಳು ಭೂಮಿ, ವಾಯು ಮತ್ತು ಸಮುದ್ರದ ಮೂಲಕ ಎಲ್ಲಾ ಮಿಲಿಟರಿ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಲು ಒಪ್ಪಿಕೊಂಡಿವೆ.
(ಏಜೆನ್ಸೀಸ್)
ವೀರ ಮರಣ ಹೊಂದಿದ ಯೋಧ ಮುರಳಿ ನಾಯಕ್ ಕುಟುಂಬಕ್ಕೆ ನಟ ಬಾಲಕೃಷ್ಣರಿಂದ ಆರ್ಥಿಕ ನೆರವು! army jawan murali naik