ಕೊಕ್ಕರ್ಣೆ: ಬ್ರಾಹ್ಮಣ್ಯ ರಕ್ಷಣೆಗಾಗಿ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಜತೆಗೆ ಕ್ಷತ್ರಿಯರಂತೆ ಹೋರಾಡ ಬೇಕಿದೆ ಎಂದು ವಿದ್ವಾನ್ ಕೌಂಜೂರು ಚಂದ್ರಶೇಖರ ಅಡಿಗ ಹೇಳಿದರು.
ಮಂದಾರ್ತಿ ವಲಯ ಬ್ರಾಹ್ಮಣ ಮಹಾಸಭಾದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವನಾಥ ಬಾಯರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪಕುಮಾರ ಮಂಜ ಮಾತನಾಡಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಭಾರ್ಗವ ಭಟ್ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಂಜುಶ್ರೀ ಅವರಿಗೆ ಪ್ರೋತ್ಸಾಹಧನ ನೀಡಿ ಪುರಸ್ಕರಿಸಲಾಯಿತು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಪುರುಷೋತ್ತಮ ಮಧ್ಯಸ್ಥ, ಹೈನುಗಾರಿಕೆ ಮತ್ತು ಕೃಷಿಯಲ್ಲಿ ಸಾಧನೆಗೈದ ಚೋರಾಡಿ ನೀಲಕಂಠ ಅಡಿಗ ಅವರನ್ನು ಸನ್ಮಾನಿಸಲಾಯಿತು. ಸಮಾಜದ ವತಿಯಿಂದ ಲೋಕಕಲ್ಯಾಣಾರ್ಥ ಶ್ರೀಲಲಿತಾ ಸಹಸ್ರನಾಮ ಯಾಗ ಮತ್ತು ಪಾರಾಯಣ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇಗುಲ ಅರ್ಚಕ ಶ್ರೀಪತಿ ಅಡಿಗ ನೇತೃತ್ವದಲ್ಲಿ ನಡೆಯಿತು. ರಮೇಶ್ ಭಟ್ ಹೆಗ್ಗುಂಜೆ ಸ್ವಾಗತಿಸಿದರು. ಕಾರ್ಯದರ್ಶಿ ರಾಮಚಂದ್ರ ಉಡುಪ ವರದಿ ಲೆಕ್ಕಪತ್ರ ಮಂಡಿಸಿದರು. ನಯನಾ ಶರ್ಮ ನಿರೂಪಿಸಿದರು. ಎಂ.ಗಣೇಶ ಅಡಿಗ ವಂದಿಸಿದರು.