

ಉಡುಪಿ: ಖಾಸಗಿ ಬಸ್ವೊಂದು ಇಲ್ಲಿನ ತಾಲೂಕು ಪಂಚಾಯಿತಿ ಕಟ್ಟಡದತ್ತ ನುಗ್ಗಿದ್ದು, ಸೇವಾಸಿಂಧು ಕಚೇರಿಗೆ ಡಿಕ್ಕಿ ಹೊಡೆದಿದೆ.
ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ಖಾಸಗಿ ಬಸ್ ಸ್ಟಾರ್ಟ್ ಆಗದ ಕಾರಣ ಜರ್ಕ್ ನೀಡಲಾಗಿತ್ತು. ಇಳಿಜಾರಿದ್ದ ಪರಿಣಾಮ ವೇಗವಾಗಿ ಚಲಿಸಿದ ಬಸ್, ಚಾಲಕನ ನಿಯಂತ್ರಣ ತಪ್ಪಿ ಎದುರಿದ್ದ ತಾಪಂ ಕಟ್ಟಡದತ್ತ ನುಗ್ಗಿತು.
ಘಟನೆಯಲ್ಲಿ ಬಸ್ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾನುವಾರ ರಜಾ ದಿನವಾಗಿದ್ದ ಹಿನ್ನೆಲೆಯಲ್ಲಿ ಸೇವಾ ಸಿಂಧು ಕಚೇರಿ ಮುಚ್ಚಿತ್ತು. ಹಾಗಾಗಿ ಅಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.