More

    ಬ್ರಹ್ಮಾವರ ಗ್ರಾಮೀಣ ಮಕ್ಕಳ ಶಿಬಿರ ಸಮಾರೋಪ

    ಬ್ರಹ್ಮಾವರ: ವಾರಂಬಳ್ಳಿ ಗ್ರಾಪಂ ಹಾಗೂ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮಾಹಿತಿ ಕೇಂದ್ರದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ 8 ದಿನ ನಡೆದು ಬುಧವಾರ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಗ್ರಾಪಂ ಸಭಾಂಗಣದಲ್ಲಿ ಜರುಗಿತು.

    ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನ ತನಕ ಸಂಪನ್ಮೂಲ ವ್ಯಕ್ತಿಗಳಿಂದ ಚಿತ್ರರಚನೆ, ಯಕ್ಷಗಾನ, ಮುಖವಾಡ ತಯಾರಿ, ಕತೆ ಕಟ್ಟುವಿಕೆ, ರಸಪ್ರಶ್ನೆ, ನಾಟಕ, ಹಾಡು ಮೊದಲಾದವುಗಳನ್ನು ಹೇಳಿಕೊಡಲಾಯಿತು. ಮಕ್ಕಳು ಆಸಕ್ತಿಯಿಂದ ಬೆರೆತು ಶಿಬಿರದ ಪ್ರಯೋಜನ ಪಡೆದರು.

    ಬುಧವಾರ ಮಕ್ಕಳನ್ನು ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ಪೊಲೀಸ್ ಠಾಣೆ, ಮತ್ತು ತೋಟಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ನೀಡಲಾಯಿತು. ಸುವರ್ಣ ಎಂಟರ್‌ಪ್ರೈಸಸ್‌ನಿಂದ ಪ್ರತಿ ಮಕ್ಕಳಿಗೆ ನಾನಾ ಜಾತಿಯ ಸಸ್ಯ ನೀಡಲಾಯಿತು.

    ಪ್ರತಿಭಾವಂತ ವಿದ್ಯಾರ್ಥಿನಿ ಸಮೀಕ್ಷಾ ಅವರನ್ನು ಗೌರವಿಸಲಾಯಿತು. ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ವಾರಂಬಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್, ಗ್ರಾಪಂ ಮಹೇಶ್, ಕಾರ್ಯದರ್ಶಿ ಶೇಖರ ನಾಯ್ಕ, ಮಧುಸೂಧನ ಹೇರೂರು, ಚಿತ್ರಕಲಾ ಶಿಕ್ಷಕ ಶೇಖರ ಪೂಜಾರಿ, ಉದ್ಯಮಿ ದೀಪಕ್ ಪೂಜಾರಿ, ಗ್ರಂಥಾಲಯ ಮೇಲ್ವಿಚಾರಕಿ ಬೇಬಿ, ಗ್ರಾಪಂ ಸಿಬ್ಬಂದಿ ಶುಭಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts