More

  ಮಕ್ಕಳಿಗೆ ಪೊಲೀಸ್​ ಪಾಠ!: ವಿವಿಧ ಠಾಣೆಗಳಲ್ಲಿ ತೆರೆದ ಮನೆ, ಇನ್​ಸ್ಪೆಕ್ಟರ್​ ನವೀನ್​ಕುಮಾರ್​ ಮಾಹಿತಿ

  ಮಧುರೆ: ಜನಸ್ನೇಹಿಯಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ಪೊಲೀಸ್​ ಇಲಾಖೆ ಮಕ್ಕಳಿಗೂ ಆಪ್ತವೆನಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಈ ಹಿನ್ನೆಲೆಯಲ್ಲಿ ದೊಡ್ಡಬೆಳವಂಗಲ ಠಾಣೆ ಪೊಲೀಸ್​
  ಇನ್ಸ್​ಪೆಕ್ಟರ್​ ನವೀನ್​ಕುಮಾರ್​ ಮಕ್ಕಳಿಗೆ ಪೊಲೀಸರ ಕರ್ತವ್ಯ, ಜವಾಬ್ದಾರಿ, ಕಾನೂನು ಮತ್ತಿತರ ವಿಷಯಗಳ ಬಗ್ಗೆ ಪಾಠ ಮಾಡಿದ್ದಾರೆ.
  ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಪೊಲೀಸ್​ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ “ತೆರೆದ ಮನೆ’ ಕಾರ್ಯಕ್ರಮದಲ್ಲಿ ಇನ್ಸ್​ಪೆಕ್ಟರ್​ ಸರ್ಕಾರಿ ಶಾಲಾ ಮಕ್ಕಳೊಂದಿಗೆ ವಿಷಯ ವಿನಿಮಯ ಮಾಡಿಕೊಂಡಿದ್ದಾರೆ. ಪೊಲೀಸರೆಂದರೆ ಭಯ ಬೇಡ, ಸಾರ್ವಜನಿಕರ ಸಹಕಾರಿಂದ ಕಾನೂನು ರಕ್ಷಣೆ ಮಾಡಲು ಸಾಧ್ಯ. ಇದರಲ್ಲಿ ಮಕ್ಕಳು ಹೊರತಾಗಿಲ್ಲ, ಅನಾವಶ್ಯಕವಾಗಿ ಪೊಲೀಸರ ಮೇಲೆ ತಪು$್ಪ ಕಲ್ಪನೆಯ ಮನೋಭಾವನೆ ಬೆಳೆಸಿಕೊಳ್ಳಬೇಡಿ ಎಂದರು.
  ಮಕ್ಕಳಲ್ಲಿ ಪೊಲೀಸರೆಂದರೆ ಸಾಮಾನ್ಯವಾಗಿ ಭಯವಿರುತ್ತದೆ, ಇಂಥ ಭಯ ಹೋಗಲಾಡಿಸಿ, ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಅಥವಾ ರಕ್ಷಣೆಯ ಅವಶ್ಯಕತೆ ಇದ್ದಾಗ ಪೊಲೀಸರ ಸಹಾಯಪಡೆಯಲು ಮಕ್ಕಳ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಇಲಾಖೆ ಸದಾ ಕಾಲ ಸನ್ನದ್ಧವಾಗಿರುತ್ತದೆ ಎಂದು ಹೇಳಿದರು. ಮಕ್ಕಳಲ್ಲಿ ಕಾನೂನು ಜಾಗೃತಿ: ಸಂಚಾರ ನಿಯಮಗಳ ಪಾಲನೆ, ಅವುಗಳ ಉಲ್ಲಂನೆಯಿಂದ ಎದುರಿಸಬೇಕಾದ ದಂಡ ಹಾಗೂ ಶಿೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಸರಗಳವು, ಸೈಬರ್​ ಕೆಂ ಮತ್ತಿತರ ವಿಚಾರಗಳ ಬಗ್ಗೆ ಪೊಲೀಸರು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಯಾವುದೇ ಅಪಾಯಕಾರಿ ಸಂದರ್ಭದಲ್ಲಿ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಪೊಲೀಸರು ತಿಳಿಸಿದರು. ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಗುರಿಯಿಟ್ಟುಕೊಂಡು ಮುನ್ನಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು, ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅರಿವು ಮೂಡಿಸಿಕೊಳ್ಳಬೇಕು ತಮ್ಮ ಪಾಲಕರಿಗೂ ಈ ಬಗ್ಗೆ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

  See also  ರಾಜಭವನದಲ್ಲಿ ನಾನು ಸುರಕ್ಷಿತವಾಗಿಲ್ಲ.. ಬಂಗಾಳ ರಾಜ್ಯಪಾಲರ ಸೆನ್ಸೇಷನಲ್ ಕಾಮೆಂಟ್!

  ವಿದ್ಯಾರ್ಥಿಗಳಿಗೆ ಕಾನೂನು ಅರಿವು
  ದೊಡ್ಡಬಳ್ಳಾಪುರ: ನಗರ, ಗ್ರಾಮಾಂತರ ಠಾಣೆಗಳಲ್ಲಿ ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ “ತೆರೆದ ಮನೆ’ ಕಾರ್ಯಕ್ರಮದಡಿ ಪೊಲೀಸ್​ ಠಾಣೆ ಮತ್ತು ಪೊಲೀಸ್​ ವ್ಯವಸ್ಥೆಯ ಬಗ್ಗೆ ಶುಕ್ರವಾರ ಅರಿವು ಮೂಡಿಸಲಾಯಿತು.
  ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಜಾಗೃತಿ ಸೇರಿ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ತಪ್ಪಿತಸ್ಥರ ಮೇಲೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್​ ಇಲಾಖೆಯ ಕರ್ತವ್ಯ, ಜವಾಬ್ದಾರಿ ಸೇರಿ ಇನ್ನಿತರ ವಿಚಾರಗಳ ಬಗ್ಗೆ
  ಇನ್​ಸ್ಪೆಕ್ಟರ್​ ಅರ್​.ದಯಾನಂದ ತಿಳಿಸಿಕೊಟ್ಟರು.
  ಮನೆಯಿಂದ ಕಾಲೇಜಿಗೆ ಬರುವಾಗ ವಿದ್ಯಾರ್ಥಿಗಳು ತಮ್ಮನ್ನು ತಾವು ಯಾವರೀತಿ ರಕ್ಷಣೆ ಮಾಡಿಕೊಳ್ಳಬೇಕು. ಪುಂಡರ ಹಾವಳಿಯಿಂದ ಯಾವ ರೀತಿ ಪಾರಾಗಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಪೊಲೀಸ್​ ಠಾಣೆ ಮತ್ತು ಪೊಲೀಸ್​ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡಲಾಯಿತು.
  ಜನ ಸ್ನೇಹಿ ಪೊಲೀಸ್​ ವ್ಯವಸ್ಥೆ : ಎಲ್ಲ ಠಾಣೆಗಳು ವಿದ್ಯಾರ್ಥಿಗಳಿಗೆ ತೆರೆದ ಮನೆಯಂತಾಗಿ, ಪೊಲೀಸ್​ ಇಲಾಖೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಬಾಂಧವ್ಯ ಧನಾತ್ಮಕವಾಗಿ ವೃದ್ಧಿಯಾಗಬೇಕು ಎಂದು ನಗರ ಠಾಣೆ ಇನ್​ಸ್ಪೆಕ್ಟರ್​ ಆರ್​.ದಯಾನಂದ ಹೇಳಿದರು. ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಲು “ತೆರೆದ ಮನೆ’ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಕಾನೂನು ಅರಿವು, ಮಾನವೀಯ ಮೌಲ್ಯಗಳ ಅಳವಡಿಕೆ ಅತ್ಯಗತ್ಯ. ತಾನು ತಪ್ಪು ಮಾಡದೆ, ಇನ್ನೊಬ್ಬರೂ ತಪ್ಪು ಮಾಡದಂತೆ ಕಾನೂನು ಚೌಕಟ್ಟಿನಲ್ಲಿ ಇರುವುದು ಎಲ್ಲರ ಜವಾಬ್ದಾರಿ. ಸಮಾಜವನ್ನು ಶಾಂತ ರೀತಿಯಿಂದ ಇಡಬೇಕು. ತಪ್ಪಿತಸ್ಥರಿಗೆ ತಕ್ಕ ಶಿೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಜನ ಸ್ನೇಹಿ ಪೊಲೀಸ್​ ವ್ಯವಸ್ಥೆಗಾಗಿ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

  See also  ಸೌಲಭ್ಯಗಳ ಬಗ್ಗೆ ಜಾಗೃತಿ ಅಗತ್ಯ

  ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಠಾಣೆಯಲ್ಲಿ ಇನ್​ಸ್ಪೆಕ್ಟರ್​ ನವೀನ್​ಕುಮಾರ್​ ಪೊಲೀಸರ ಕಾರ್ಯಚಟುವಟಿಕೆಗಳ ಬಗ್ಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts