More

    ಬಾರಕೂರು ಪ್ರಾಚೀನ ಕೂಡ್ಲಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ

    ಬ್ರಹ್ಮಾವರ: ಬಾರಕೂರು ಪ್ರಾಚೀನ ಕೂಡ್ಲಿ ಶ್ರೀ ಜನಾರ್ದನ ದೇವರ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಅರ್ಚಕ ಗಣಪತಿ ಉಡುಪ ನೇತೃತ್ವದಲ್ಲಿ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು.

    ಬೆಳಗ್ಗೆ ಪಂಚವಿಂಶತಿ ಬ್ರಹ್ಮಕಲಶ ಸ್ಥಾಪನೆ, ಪ್ರಧಾನಾಧಿವಾಸ ಹೋಮ, ಋಕ್ ಸಂಹಿತಾ ಪಾರಾಯಣ, ಕಲಶಾಭಿಷೇಕ, ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ಜರುಗಿತು. ದೇವರಿಗೆ ವಿಷೇಷ ಅಲಂಕಾರ ಮಾಡಲಾಗಿತ್ತು.

    ಉತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್, ಆಡಳಿತ ಮೋಕ್ತೇಸರ ಡಾ.ವೆಂಕಟರಮಣ ಉಡುಪ, ಸಮಿತಿ ಸದಸ್ಯರಾದ ರೇವತಿ ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಅಡಿಗ, ಅಖೀಲೆಶ್ ನಾಯಕ್, ಸೀತಾರಾಮ ಶಾಸ್ತ್ರಿ, ಚರಡ ನಾಯ್ಕ, ಲತಾ ಎಸ್.ನೇತೃತ್ವ ವಹಿಸಿದ್ದರು.

    ಪೂಜೆ ಮತ್ತು ಉತ್ಸವದಲ್ಲಿ ಭಕ್ತರು ಭಾಗಿಯಾದ್ದರು. ಸಂಜೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಭಜನೆ, ಮಹಾರಂಗಪೂಜೆ, ಬಳಿಕ ಕಾಲಮಿತಿ ಯಕ್ಷಗಾನ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts