More

    ಸಾಲಿಗ್ರಾಮ ಮಹಿಳಾ ಬಳಗದಿಂದ ‘ವಿಪ್ರ ಕೂಟ’

    ಕೋಟ: ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಮನೆ ಮನೆಯಲ್ಲಿ ಪಸರಿಸುವ ಉದ್ದೇಶದಿಂದ ಸಾಲಿಗ್ರಾಮ ವಿಪ್ರ ಮಹಿಳಾ ಬಳಗ ‘ವಿಪ್ರ ಕೂಟ’ ಎಂಬ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ.

    ಪ್ರತಿ ತಿಂಗಳು ಒಂದು ಮನೆಯನ್ನು ಆಯ್ಕೆಮಾಡಿ ಭಜನೆ, ಶ್ಲೋಕ, ನೃತ್ಯ, ಗ್ರಾಮೀಣ ಆಟಗಳು, ಗಾದೆ ಮಾತು, ಅಂತ್ಯಾಕ್ಷರಿ, ರಸಪ್ರಶ್ನೆ, ಶೋಭಾನೆ ಹಾಡು, ಜಾನಪದ ಹಾಡು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಜತೆಗೆ ಗ್ರಾಮೀಣ ತಿಂಡಿ ತಿನಿಸುಗಳನ್ನು ತಯಾರಿಸಿ ಹಂಚುತ್ತಾರೆ. ಅಲ್ಲದೆ ಸಮುದಾಯದ ಮನೆಯಲ್ಲಿ ಕೃಷಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ.

    ಸ್ನೇಹಕೂಟವೇ ಪ್ರೇರಣೆ

    ಮಣೂರಿನ ಭಾರತೀ ಮಯ್ಯ ನೇತೃತ್ವದ ಸ್ನೇಹಕೂಟದಿಂದ ಪ್ರೇರಿತರಾದ ಸದಸ್ಯೆ ವನಿತಾ ಉಪಾಧ್ಯ ವಿಪ್ರ ಮಹಿಳಾ ಬಳಗದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts