ಮುದಗಲ್: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ಕೆಸರುಮಯವಾಗಿದ್ದು, ಸಂಚಾರಕ್ಕೆ ಜನರು ತೊಂದರೆ ಪಡುವಂತಾಗಿದೆ.
ಪುರಸಭೆ ವ್ಯಾಪ್ತಿಯ ವೆಂಕಟರಾಯನಪೇಟೆ, ಸೋಮವಾರಪೇಟೆ, ಮೇಗಳಪೇಟೆ ಸೇರಿ ಅನೇಕ ಬಡಾವಣೆಗಳಲ್ಲಿ ರಸ್ತೆ ಮೇಲೆ ಮಳೆ ನೀರು ನಿಂತಿದೆ. ಉಪ್ಪರನಂದಿಹಾಳ ಗ್ರಾಪಂ.ವ್ಯಾಪ್ತಿಯ ಕನ್ನಾಪುರಹಟ್ಟಿಯಲ್ಲಿ ಮಳೆ ನೀರಿನಿಂದ ರಸ್ತೆ ಕೆಸರುಮಯವಾಗಿದೆ. ರಸ್ತೆ ಮೇಲೆ ಸವಳು ಮಿಶ್ರಿತ ಮಣ್ಣು ಹಾಕಿದ್ದರಿಂದ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ.