More

    ಮುಂಡಾ ಮೋಚ್ತು…ಎನ್ನುತ್ತಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ಬ್ರಹ್ಮಾಂಡ ಗುರೂಜಿ

    ಬೆಂಗಳೂರು: ವಾರದಿಂದ ವಾರಕ್ಕೆ ರಂಗೇರುತ್ತಿದೆ ಬಿಗ್ ಬಾಸ್ ರಿಯಾಲಿಟಿ ಶೋ. ಡಬಲ್ ಎಲಿಮಿನೇಷನ್ ಬಳಿಕ ಬೇಸರದಲ್ಲಿರುವ ಮನೆ ಮಂದಿಯಲ್ಲಿ ಉತ್ಸಹ ತುಂಬಲು ಬ್ರಹ್ಮಾಂಡ ಗುರೂಜಿ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತಾದ ಪ್ರೋ ಮೊವನ್ನು ಖಾಸಗಿವಾಹಿನಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ಬಿಗ್​ ಬಾಸ್​ ಮನೆಗೆ ಅನೇಕರು ಗೆಸ್ಟ್​ ಆಗಿ ಬರುತ್ತಿದ್ದಾರೆ. ಬ್ರಹ್ಮಾಂಡ ಗುರೂಜಿ ಎಂದೇ ಫೇಮಸ್​ ಆಗಿರುವ ನರೇಂದ್ರ ಬಾಬು ಶರ್ಮಾ ಅವರು ಈಗ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಅವರು ಕಾಲಿಟ್ಟಿದ್ದು ಎಲ್ಲರಿಗೂ ಅಚ್ಚರಿ ಆಗಿದೆ. ಬ್ರಹ್ಮಾಂಡ ಗುರೂಜಿ ಯಾಕೆ ಬಂದಿರಬಹುದು? ಇವರು ಸ್ಪರ್ಧಿನಾ? ಎಂದು ಬಿಗ್​ಬಾಸ್​ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

    ಬಿಗ್​ಬಾಸ್ ಮನೆ ಮುಖ್ಯ ದ್ವಾರದ ಮೂಲಕ​​ ಬ್ರಹ್ಮಾಂಡ ಗುರೂಜಿ ಅವರು ಆಗಮನವಾಗಿದೆ. ಅವರನ್ನು ನೋಡಿದ ಮನೆ ಮಂದಿ, ಓಹ್…‌ ಓಹೋ ಎಂದು ಕೂಗಿ ಅವರನ್ನು ಸ್ವಾಗತಿಸಿದ್ದಾರೆ. ಹಲೋ ಬಂದಿದಿನಿ ಶುರು ಹಚ್ಕೋಳಿ.. ಎಂಬ ಡೈಲಾಗ್‌ ಮೂಲಕ ಕನ್‌ಫೆಷನ್‌ ರೂಮ್‌ನಲ್ಲೂ ಬ್ರಹ್ಮಾಂಡ ಗುರೂಜಿ ಕಾಣಿಸಿಕೊಂಡಿದ್ದಾರೆ. ಇತ್ತ ಅವ್ರು ಬಯ್ಯೋಕೆ ಶುರು ಮಾಡಿದ್ರೆ ಅದರ ಮಜಾನೇ ಬೇರೆ ಎಂದು ವಿನಯ್‌ ಗೌಡ ಅವರ ಹಾಸ್ಯದ ಬಗ್ಗೆ ಮಾತನಾಡಿದ್ದಾರೆ. ಮುಂಡಾ ಮೋಚ್ತು, ಹಾಳಾಗೋಗ್ಲಿ, ಪುಟಗೋಸಿ, ಪಿಂಡ ಎಂಬೆಲ್ಲ ಮಾತುಗಳು ಗುರೂಜಿ ಬಾಯಿಂದ ಹೊರಬಂದಿವೆ. ಮನೆ ಮಂದಿಯೂ ನಗೆಗಡಲಲ್ಲಿ ತೇಲಿದ್ದಾರೆ. ಮನೆಯಲ್ಲಿನ ಕ್ಯಾಮರಾಗಳು ಎಲ್ಲೆಲ್ಲಿವೆ ಎಂದು ಹುಡುಕಾಡಿ ಅವುಗಳ ಜತೆ ಮಾತನಾಡಲು ಆರಂಭಿಸಿದ್ದಾರೆ ಬ್ರಹ್ಮಾಂಡ ಗುರೂಜಿ. ಎಲ್ಲರನ್ನೂ ಒಂದು ಕಡೆ ಸ್ಟ್ಯಾಚು ಅಂತ ಹೇಳಿ ನಿಲ್ಲಿಸಿ, ನನಗೆ ಓಡಾಡೋಕೆ ಆಗಲ್ಲ. ಇಲ್ಲಾಂದ್ರೆ ಮನೆ ಬಿಟ್ಟು ಹೋಗ್ತಿನಿ ಎಂದು ಹೇಳಿದ್ದಾರೆ. ಈ ಪ್ರೋಮೊವನ್ನು ಖಾಸಗಿವಾಹಿನಿ ಕಂಚಿಕೊಂಡಿದೆ.

    ಬಿಗ್‌ಬಾಸ್‌ನ ಮೊದಲ ಸೀಸನ್‌ನ ಸ್ಪರ್ಧಿಗಳ ಪೈಕಿ ಬ್ರಹ್ಮಾಂಡ ಗುರೂಜಿ ಸಹ ಭಾಗವಹಿಸಿದ್ದರು. ವಿಜಯ್ ರಾಘವೇಂದ್ರ ವಿಜೇತರಾದರೆ, ಅರುಣ್‌ ಸಾಗರ್‌ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು, ನಿಖಿತಾ ಮೂರನೇ ಸ್ಥಾನ ಪಡೆದರೆ, ನರೇಂದ್ರ ಬಾಬು ಶರ್ಮಾ (ಬ್ರಹ್ಮಾಂಡ ಗುರೂಜಿ) ನಾಲ್ಕನೇ ಸ್ಥಾನದಲ್ಲಿದ್ದರು.

    ನಮ್ಮ ನಡಿಗೆ ಬಿಗ್​ ಬಾಸ್​ ಕಡೆಗೆ…ಎತ್ತಿನ ಗಾಡಿ ಏರಿ ಕಿಚ್ಚನ​ ಮನೆಗೆ ಬಂದ ರೈತ, ಮುಂದೇನಾಯ್ತ?

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts