More

    ನಮ್ಮ ನಡಿಗೆ ಬಿಗ್​ ಬಾಸ್​ ಕಡೆಗೆ…ಎತ್ತಿನ ಗಾಡಿ ಏರಿ ಕಿಚ್ಚನ​ ಮನೆಗೆ ಬಂದ ರೈತ, ಮುಂದೇನಾಯ್ತ?

    ಬೆಂಗಳೂರು: ಬಿಗ್​ಬಾಸ್​​ ಅತ್ಯಂತ ಹೆಚ್ಚಿನ ಜನಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿದೆ. ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡಲು ಜನಸಾಮಾನ್ಯರು ಹಾಗೂ ಸೆಲಬ್ರೆಟಿಗಳು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಕೆಲವು ಜನಕ್ಕೆ ಮಾತ್ರ ಅವಕಾಶ ದೊರೆಯುತ್ತದೆ. ಹೀಗೆ ಬಿಗ್​ಬಾಸ್​ ಮನೆ ಪ್ರವೇಶ ಮಾಡಲು ನನಗೆ ಒಂದು ಅವಕಾಶ ಕೊಡಿ ಎಂದು ರೈತನೊಬ್ಬ ಕಿಚ್ಚಾ ಸುದೀಪ್​​ ಅವರ ಬಳಿ ವಿಶೇಷವಾಗಿ ಮನವಿ ಮಾಡಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

    ವ್ಯಕ್ತಿಯೊಬ್ಬ ಎತ್ತಿನ ಗಾಡಿನಲ್ಲಿ ಬೆಂಗಳೂರಿಗೆ ಬಂದು ಕಿಚ್ಚ ಸುದೀಪ್​ ಅವರ ಮನೆಯ ಎದುರಿನಲ್ಲಿ ಹೈಡ್ರಾಮಾ ಮಾಡಿದ್ದಾರೆ. ‘ನಮ್ಮ ನಡಿಗೆ ಬಿಗ್​ ಬಾಸ್​ ಕಡೆಗೆ. ಅವಿದ್ಯಾವಂತ ರೈತರಿಗೆ ಒಂದು ಅವಕಾಶ ಕೊಡಿ’ ಎಂಬ ಬ್ಯಾನರ್​ ಅನ್ನು ಎತ್ತಿನ ಗಾಡಿಗೆ ಕಟ್ಟಿಕೊಂಡು ಅವರು ಬಂದಿದ್ದಾರೆ.

    ರೈತ ತಾನೂ ಟಿ. ನರಸೀಪುರದಿಂದ ಬಂದಿರುವುದಾಗಿ ಈ ವ್ಯಕ್ತಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸುದೀಪ್​ ಮನೆಯ ಭದ್ರತಾ ಸಿಬ್ಬಂದಿ ಈ ರೈತನಿಗೆ ಬುದ್ಧಿ ಹೇಳಿ ವಾಪಸ್​ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತಾದ ವಿಡಿಯೋ ವೈರಲ್​ ಆಗುತ್ತಿದೆ.


    ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಆದರೆ ಎಲ್ಲರಿಗೂ ಚಾನ್ಸ್​ ಸಿಗುವುದಿಲ್ಲ. ಅವಕಾಶಕ್ಕಾಗಿ ಕೆಲವರು ಹಲವಾರು ಬಗೆಯ ಸರ್ಕಸ್​ ಮಾಡುತ್ತಾರೆ. ವಿವಿಧ ರೀತಿಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts