ಹೆತ್ತ ತಾಯಿಗಾಗಿ ಬರಿಗಾಲಲ್ಲಿ 3 ಕಿಮೀ ನಡೆದು, ತಂದೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಾಲಕ

boy without footwear
Published on

ಆಗ್ರಾ: ಜಗತ್ತಿನಲ್ಲಿ ತಾಯಿ ಪ್ರೀತಿಯ ಮುಂದೆ ಎಲ್ಲವೂ ನಶ್ವರ. ತಾಯಿಗಾಗಿ ಬರಿಗಾಲಲ್ಲಿ 3 ಕಿ.ಮೀ. ನಡೆದುಕೊಂಡು ಹೋಗಿ ಬಾಲಕನೊಬ್ಬ ತನ್ನ ತಂದೆಯೇ ವಿರುದ್ದವೇ ಪೊಲೀಸರಿಗೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

40 ವರ್ಷದ ಹರಿ ಓಮ್ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಆಗ್ರಾ ಗ್ರಾಮಾಂತರದ ಬಹ್‌ನಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು ಮದ್ಯವ್ಯಸನಿಯಾಗಿದ್ದಾನೆ.

ಮಂಗಳವಾರದಂದು ಕುಡಿದ ಅಮಲಿನಲ್ಲಿ ತನ್ನ ತಂದೆಯು, ತಾಯಿಯನ್ನು ಕಬ್ಬಿಣದ ಪೈಪ್ ಮತ್ತು ಬೆಲ್ಟ್‌ನಿಂದ ಹೊಡೆಯುವುದನ್ನು ನೋಡಿದ 12 ವರ್ಷದ ಬಾಲಕ 3 ಕಿ.ಮೀ. ನಡೆದುಕೊಂಡು ಪೊಲೀಸ್ ಠಾಣೆಗೆ ತೆರಳಿ, ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಪೊಲೀಸರು, ಹುಡುಗನ ಮನೆಗೆ ಧಾವಿಸಿ ಹರಿಓಮ್​ನನ್ನು ಬಂಧಿಸಿದ್ದರು. ಆದರೆ ಆರೋಪಿಯ ಹೆಂಡತಿ, ಆತನ ವಿರುದ್ಧ ಯಾವುದೇ ಆರೋಪಗಳನ್ನು ಮಾಡಲು ಬಯಸದ ಕಾರಣ ಆತನನ್ನು ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.

ಬಾಲಕನ ಧೈರ್ಯವನ್ನು 70 ವರ್ಷದ ಅಜ್ಜ ದೇಶರಾಜ್​ ಹಾಗೂ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಬಾಲಕನ ಕುರಿತು ಮಾತನಾಡಿದ ಪೊಲೀಸರು, ಚಿಕ್ಕ ಹುಡುಗನ ಧೈರ್ಯವನ್ನು ನೋಡಿ ನಮಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗೆಯಾಗಿದೆ. ಅವನ ವಯಸ್ಸಿನ ಮಕ್ಕಳು ಪೊಲೀಸ್ ಠಾಣೆಗೆ ಧಾವಿಸಿ ಇಂತಹ ಘಟನೆಗಳ ಬಗ್ಗೆ ದೂರು ನೀಡುವುದು ಅಪರೂಪ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net